ಪ್ರಶಸ್ತಿಗೆ ನಾನು ಆಭಾರಿ; ರಷ್ಯಾ ಜನತೆಗೆ ಧನ್ಯವಾದ ತಿಳಿಸಿದ ಮೋದಿ

ರಷ್ಯಾದ ಅತ್ಯುನ್ನತ “ಆರ್ಡರ್ ಆಫ್ ಸೇಂಟ್ ಅ್ಯಂಡ್ರೂ ದಿ ಅಪೋಸ್ಟ್ಳೇ” ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಈ ಕುರಿತಂತೆ ರಷ್ಯಾ ರಾಯಾಭಾರಿ ಕಚೇರಿ ಹಾಗೂ ರಷ್ಯಾ ಅಧ್ಯಕ್ಷರ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್​ ಮಾಡಿ ತಿಳಿಸಿದೆ. ಈ ಕುರಿತಂತೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ‘ಈ ಪ್ರಶಸ್ತಿಗೆ ನಾನು ಆಭಾರಿಯಾಗಿದ್ದೇನೆ.  ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ರಷ್ಯಾ ಜನತೆಗೆ ಧನ್ಯವಾದ ತಿಳಿಸುತ್ತೇನೆ. ರಷ್ಯಾ ಹಾಗೂ ಭಾತರದ ಸ್ನೇಹ ಅಡಿಪಾಯ ಮತ್ತಷ್ಟು ಆಳವಾಗಿದ್ದು, ಭವಿಷ್ಯದಲ್ಲಿ ಪ್ರಕಾಶಿಸಲಿದೆ. ಎರಡೂ ದೇಶಗಳ ನಡುವಿನ ಸ್ನೇಹಕ್ಕೆ ಪುಟಿನ್​ ದೊಡ್ಡ ಶಕ್ತಿಯಾಗಿದ್ದಾರೆ. ಅವರ ದೂರದೃಷ್ಟಿಯ ಆಡಳಿತ, ಹೊಂದಾಣಿಕೆ ನಮ್ಮ ಹಾಗೂ ರಷ್ಯಾದ ನಡುವಿನ ಸ್ನೇಹವನ್ನು ಮತ್ತಷ್ಟು ಎತ್ತರಕ್ಕೆ ತಗೆದೊಕೊಂಡು ಹೋಗಿಎ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ದುಬೈ ಆಯ್ತು ಈಗ ಮೋದಿಗೆ 1698ರಲ್ಲಿ ಸ್ಥಾಪನೆಯಾದ ರಷ್ಯಾದ ಅತ್ಯುನ್ನತ ಪ್ರಶಸ್ತಿ ಪ್ರದಾನ..!