ಕಾಂಗ್ರೆಸಿಗರು ತಮ್ಮ ಪೀಳಿಗೆ ಬೆಳೆಸಿ, ಅಧಿಕಾರ ಮುಂದುವರಿಸುವ ಕೆಲ್ಸ ಮಾಡ್ತಿದ್ದಾರೆ: ಮೋದಿ

ಮಂಗಳೂರು: ಇವತ್ತು ಕೇಸರಿ ಸಮುದ್ರ ಅಲೆ ಹರಿದಾಡುವಂತೆ ಕಾಣುತ್ತಿದೆ. ವಿಮಾನ‌ ನಿಲ್ದಾಣದಿಂದ ಬರುತ್ತಿರುವಾಗ ರಸ್ತೆಯಿಡೀ ಮಾನವ ಗೋಡೆ ನಿರ್ಮಾಣವಾಗಿತ್ತು. ಅಲ್ಲಿಯೇ ಅಷ್ಟು ಜನ ಜಮಾಯಿಸಿರುವಾಗ ಸಮಾವೇಶದಲ್ಲಿಒ ಜನ ಕಡಿಮೆ ಸೇರಿಸಬಹುದಾ? ಅಂತಾ ಯೋಚನೆ ಮಾಡಿದ್ದೆ. ಆದ್ರೆ ಇಲ್ಲಿ, ಅಲ್ಲಿಗಿಂತ ಮಿಗಿಲಾದ ಜನ ಇದ್ದಾರೆ. ನಿಮ್ಮಿಂದಲೇ ನನಗೆ ದೊಡ್ಡ ದೊಡ್ಡ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದೆ. ಬೆಣ್ಣೆಯಲ್ಲಿ ಮಾತ್ರವಲ್ಲ ಕಲ್ಲಿನಲ್ಲೂ ಹಣೆಬರಹ ಬರೆಯಲು ಇಂದು ಸಾಧ್ಯವಾಗಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಆತ್ಮೀಯ ನಾಗರಿಕ ಬಂಧುಗಳಿಗೆ ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಮೋದಿ, ನಿಮ್ಮೆಲ್ಲರಿಗೂ ರಾಮ ನವಮಿ ಹಬ್ಬದ ಅಭಿನಂದನೆಗಳು. ಮುಂದೆ ಅಂಬೇಡ್ಕರ್ ಜಯಂತಿಯೂ ಇದೆ, ಅವರಿಗೆ ಕೂಡಾ ನಮನಗಳು. ಈಗ ಪ್ರಪಂಚದಲ್ಲಿ ಹಿಂದೂಸ್ತಾನದ ಘೋಷಣೆಯಾಗ್ತಿದೆಯೇ, ಇಲ್ಲವೇ? ಅಮೆರಿಕಾ, ರಷ್ಯಾ, ಕೆನಡಾದಲ್ಲೂ ಭಾರತಕ್ಕೆ ಜೈಕಾರ ಕೊಗುತ್ತಿದ್ದಾರೆ. ಇದು ಮೋದಿಯ ಕಾರಣದಿಂದಲ್ಲ,‌ ನಿಮ್ಮ ಒಂದು ಮತದಿಂದಾಗಿ ಸಾಧ್ಯವಾಗಿದೆ. ಕಳೆದ ಬಾರಿ ನೀವು ನೀಡಿದ ಆಶೀರ್ವಾದದಿಂದ ನಾನು ಧೈರ್ಯದಿಂದ ನಿಲ್ಲಲು ಸಾಧ್ಯವಾಗಿದೆ. ಈ ಬಾರಿ ಚುನಾವಣೆಯಲ್ಲಿ ಯಾರು ಪ್ರಧಾನಿ, ಯಾರು ಸಂಸದ, ಯಾವ ಸರ್ಕಾರ ಬೇಕೆಂಬ ವಿಚಾರವಲ್ಲ. ನವ ಭಾರತದ ಯಾವ ರೀತಿ ಬೇಕೆಂದು ನೀವು ಈ ಚುನಾವಣೆಯಲ್ಲಿ ನಿರ್ಧರಿಸಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ಪ್ರೇರಣೆ ಎಂಬುದು ಪರಿವಾರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ನಮಗೆ ಪ್ರೇರಣೆಯಾಗುವುದು ರಾಷ್ಟ್ರೀಯವಾದ. ಕಾಂಗ್ರೆಸಿಗರು ತಮ್ಮ ಪೀಳಿಗೆ ಬೆಳೆಸಿ ಅಧಿಕಾರ ಗಳಿಸುವ ಕೆಲಸ ಮಾಡ್ತಿದ್ದಾರೆ. ಅಧಿಕಾರ ಪಡೆಯಲು ವಿವಿಧ ದಾರಿ ಹುಡುಕ್ತಾ ಇರ್ತಾರೆ. ಅವರ ವಂಶೋದಯದಿಂದ ಅನ್ಯಾಯ ಸೃಷ್ಟಿಯಾಗುತ್ತದೆ. ನಮ್ಮ ಅಂತ್ಯೋದಯದಿಂದ ಪಾರದರ್ಶಕತೆ ನಿರ್ಮಿಸುತ್ತದೆ. ಅವರ ವಂಶೋದಯ ಬಡತನ ಕಡಿಮೆ ಮಾಡುವ ಘೋಷಣೆ ಮಾತ್ರ ಮಾಡಿದೆ. ನಮ್ಮ ಅಂತ್ಯೋದಯ ಬಡತನವನ್ನೇ ಕಡಿಮೆ ಮಾಡಿದೆ. ಅವರ ವಂಶೋದಯ ತುಷ್ಠೀಕರಣವನ್ನು ರಾಜನೀತಿಯ ಆಧಾರ ಮಾಡಿತ್ತು. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ವಾದವಾಗಿದೆ. ಅವರು ಪರಿಚಿತರಿಗೆ ಮಾತ್ರ ಮಣೆ ಹಾಕಿದ್ರೆ, ನಾವು ಅಪರಿಚಿತರಿಗೂ ಗೌರವ ನೀಡ್ತೇವೆ. ಸ್ವತಂತ್ರದ ಬಳಿಕ ಕಾಂಗ್ರೆಸ್ ಹಿಂದೂಸ್ತಾನಕ್ಕೆ ಯಾವ ಶಾಸನ ನೀಡಬೇಕಿತ್ತು ಅದನ್ನು ನೀಡಿಲ್ಲ. ಡಾ. ರಾಧಾಕೃಷ್ಣನ್ ರಾಷ್ಟ್ರಪತಿಯಾಗಿದ್ದು, ಕರ್ನಾಟಕದ ಗೌರವವಾಗಿದ್ರು. ಅವರ ಮೂರ್ತಿಯನ್ನು ಹಿಂದಿನ ಕೇಂದ್ರ ಸರ್ಕಾರ ಮಾಡಿದೆಯಾ? ಜಲಿಯನ್ ವಾಲಾಬಾಗ್‌ನಲ್ಲಿ ಸಾಕಷ್ಟು ಜನರು ಹುತಾತ್ಮರಾಗಿದ್ದಾರೆ. ಜಲಿಯನ್ ವಾಲಾಬಾಗ್​​ನಲ್ಲಿ ಹುತ್ಮಾತ್ಮರಾದವರ ಹೆಸರು ಹೇಳಿದ್ರೆ ಕಾಂಗ್ರೆಸ್​​​ನವರಿಗೆ ಇರುಸುಮುರುಸು ಆಗುತ್ತದೆ. ಯಾದ್ ಹೈ ಜಲಿಯಾ ಮ್ಯೂಸಿಯಂ ಮಾಡುವಾಗ ಕಾಂಗ್ರೆಸಿಗರಿಗೆ ಬೇಜಾರಾಗುತ್ತೆ. ಸೈನಿಕರ ಒನ್ ಱಂಕ್​ ಒನ್ ಪೆನ್ಶನ್ ಪೂರೈಕೆಯಾದಾಗಲೂ ಅವರಿಗೆ ಸಮಸ್ಯೆಯಾಗುತ್ತೆ. ಸರ್ಜಿಕಲ್ ಸ್ಟ್ರೈಕ್ ಮಾಡುವಾಗ ಇವರಿಗೆ ಪ್ರೂಫ್ ಬೇಕಿದೆ ಎಂದು ಕಾಂಗ್ರಸಿಗರ ವಿರುದ್ಧ ಹರಿಹಾಯ್ದಿದರು.

ನಿಮಗೆ ನಮ್ಮ ಜವಾನರ ಮೇಲೆ ನಂಬಿಕೆಯಿಲ್ವಾ? ಅವರ ತಾಕತ್ತಿನ ಮೇಲೆ ನಂಬಿಕೆ ಇಲ್ವಾ? ನಮ್ಮ ಭಾರತದ ಉಗ್ರರ ಮನೆಗೆ ಹೊಕ್ಕು ಅವರನ್ನು ಹೊಡೆದು ಹಾಕುತ್ತಿದ್ದಾರೆ. ಅದೂ ಕೂಡಾ ಅವರಿಗೆ ಸಮಸ್ಯೆಯಾಗುತ್ತಿದೆ. ಕಾಂಗ್ರೆಸ್ ದೇಶದ ಸೇನಾಧ್ಯಕ್ಷರಿಗೂ ಗಲೀ ಕಾ ಗೂಂಡಾ ಅಂತಿದ್ದಾರೆ. ಅವರಿಗೆ ಈ ರೀತಿ ಹೇಳಲು ನಾಚಿಕೆಯಾಗಬೇಕು ಅಲ್ವಾ? ಕಾಂಗ್ರೆಸ್ ದೇಶದ ಸಂಸ್ಕೃತಿ ಸದೃಢಗೊಳಿಸೋ ಬದಲು ಅದನ್ನು ಹಾಗೆಯೇ ಬಿಟ್ಟಿದೆ. ಕೇರಳದಲ್ಲಿ ಭಗವಾನ್ ಅಯ್ಯಪ್ಪನ ಹೆಸರು ಕೂಡಾ ಹೇಳದ ಸ್ಥಿತಿಯಾಗಿದೆ. ಶಬರಿಮಲೆ ಹೆಸರು ಹೇಳಿದರೆ ಜೈಲಿಗೆ ಸೇರಿಸುತ್ತಾರೆ. ನಮ್ಮ ಅಭ್ಯರ್ಥಿಯನ್ನು ಕೂಡಾ. ಜೈಲಿಗೆ ಹಾಕಿದ್ರು, ನಾನು ಭೇಟಿ ನೀಡಿದ ದಿನ ಬಿಡುಗಡೆಗೊಳಿಸಿದ್ರು. ಕಾಂಗ್ರೆಸ್ ಜನರಿಗೆ ತೊಂದರೆ ಮಾಡಿದ್ದು ಮಾತ್ರವಲ್ಲ, ಸೈನ್ಯವನ್ನೂ ಬಲಹೀನರಾಗಿಸಿದ್ದರು ಎಂದರು.

ಕಾಂಗ್ರೆಸ್​ನವರನ್ನ ಪ್ರಪಂಚದಲ್ಲಿ ಎಲ್ಲಿ ಹೋದರೂ ಮೋದಿ ಬಿಡಲ್ಲ:
ಬ್ಯಾಂಕಿಂಗ್ ಕ್ಷೇತ್ರವನ್ನು ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿ ಬಿಟ್ಟು ಹೋಗಿತ್ತು. 70 ವರ್ಷಗಳಲ್ಲಿ ಬ್ಯಾಂಕಿಂಗ್‌ನಿಂದ ಸಿಕ್ಕಾಪಟ್ಟೆ ಸಾಲ ಪಡೆಯಲಾಗಿತ್ತು. ಚೌಕಿದಾರ್ ಅಡ್ಡಕಾಲಿಟ್ಟಿದ್ದರಿಂದ ಅವರ ಗೇಮ್ ನಿಂತಿದೆ. ಅವರು ಓಡ್ತಿದ್ದಾರೆ, ಓಡುತ್ತಿದ್ದಾರೆ.. ಆದರೆ, ಓಡಿ ಎಲ್ಲಿಗೆ ಹೋಗುತ್ತಾರೆ? ಅವರು ಪ್ರಪಂಚದ ಎಲ್ಲಿ ಹೋದರೂ ಮೋದಿ ಬಿಡಲ್ಲ. ಮಿಷಲ್ ಮಾಮಾ, ಸಕ್ಸೇನಾ, ತಲವಾರ್ ನನ್ನು ಈಗಾಗಲೇ ಕರೆತರಲಾಗಿದೆ. ಇನ್ನೂ ಮೂರು ಜನರು ಬರಬೇಕಿದೆ ಎಂದು ಅವರಿಗೆ ತಿಳಿಯಬೇಕಿದೆ. ರೈತರಿಂದ ವಿದ್ಯಾರ್ಥಿಗಳವರೆಗೆ ಸಹಾಯ ಮಾಡಲು ವ್ಯವಸ್ಥೆ ಮಾಡಿದ್ದೇನೆ. ಸಂಕಷ್ಟದಲ್ಲಿರುವ ರೈತರ ಲಿಸ್ಟ್ ‌ರಾಜ್ಯ ಸರಕಾರ ಇನ್ನೂ ನೀಡಿಲ್ಲ. ಅವರು ಸಣ್ಣ ಲಿಸ್ಟ್ ತಂದು ತೋರಿಸುತ್ತಿದ್ದಾರಷ್ಟೇ. ಸಾಲ ಮನ್ನಾ ಅವರಂತೂ ಮಾಡಿಲ್ಲ, ಉಳಿದವರಿಗೆ ಮಾಡಲೂ ಬಿಡಲ್ಲ. ಈ ಸಮ್ಮಿಶ್ರ ಸರ್ಕಾರವನ್ನ ಜನರು ಸೋಲಿಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಯೋಜನೆ ರೂಪಿಸಿದೆ. ಮೇ 23 ರಂದು ಮೋದಿ ಸರ್ಕಾರ ಬಂದಂತೆ ಮೀನುಗಾರರಿಗೆ ಸಚಿವಾಲಯ ಘೋಷಣೆಯಾಗುತ್ತೆ. ಟ್ರಾಲ್ ಬೋಟ್‌ನವರಿಗೂ ಡೀಪ್ ಸೀ ಫಿಶಿಂಗ್ ನಡೆಸಲು ಅವಕಾಶ ಒದಗಿಸಲಾಗುವುದು. ಸಂಕಟದ ವೇಳೆ ರಕ್ಷಣೆ ಎಲೆಕ್ಟ್ರಾನಿಕ್ ಡಿವೈಸ್ ವ್ಯವಸ್ಥೆಯೂ ನೀಡಲಾಗುತ್ತಿದೆ. ಮತ್ಸ್ಯ ಸಂಪದ ಯೋಜನೆ ನಡೆಸಲು ಕೂಡಾ ಬಿಜೆಪಿ ಘೋಷಣೆ ಮಾಡಿದೆ. ಚೌಕಿದಾರನ ಯೋಜನೆ ನಿಮ್ಮ ಸಹಯೋಗದ ಅವಶ್ಯಕತೆಯಿದೆ. ಇದಕ್ಕಾಗಿ ಮತ್ತೆ ಕಮಲ ಅರಳಬೇಕಾಗಿದೆ. ಕಳೆದ ಬಾರಿ ಸಣ್ಣ ತಪ್ಪಿನಿಂದಾಗಿ ರಾಜ್ಯದಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದಿದೆ. ಮುಂದಿನ ಬಾರಿ ಆ ತಪ್ಪು ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ನಂತರ ಮೋದಿ ನಗರ- ನಗರ ಎಲ್ಲವೂ, ಮಕ್ಕಳೂ, ಹಿರಿಯರು, ತಾಯಿ ಮಕ್ಕಳು, ವೈದ್ಯರು, ಪತ್ರಕರ್ತರು, ವಕೀಲರು, ಗಡಿಯಲ್ಲಿ ಕೂಡಾ ಚೌಕಿದಾರ್​​ ಎಂದು ಕನ್ನಡದಲ್ಲಿ ಘೋಷಣೆ ಕೂಗಿದರು. ಈ  ಘೋಷಣೆಗೆ ಜನಸಾಮಾನ್ಯರು ಸಾಥ್ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv