‘ಭಾರತದ ಹೆಸರು ರಾರಾಜಿಸುತ್ತಿದೆ, ಇದು ಸಾಧ್ಯವಾಗಿದ್ದು 2014ರಲ್ಲಿ ನೀವು ನನಗೆ ನೀಡಿದ ಮತದಿಂದಾಗಿ’

ಮಂಗಳೂರು: ಜಗತ್ತಿನಾದ್ಯಂತ ಸದ್ಯ ಭಾರತದ ಹೆಸರು ರಾರಾಜಿಸುತ್ತಿದೆ ಇದಕ್ಕೆ ಕಾರಣ 2014ರಲ್ಲಿ ನೀವು ನನಗೆ ನೀಡಿದ ಮತದಿಂದಾಗಿ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದಲ್ಲಿ ನಡೆದ ವಿಜಯ ಸಂಕಲ್ಪ ಱಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್​​ನವರದ್ದು ವಂಶೋದ್ಧಾರ, ನಮ್ಮದು ಅಂತ್ಯೋದಯ. ಇದು ಒಬ್ಬ ಚಾಯ್​ವಾಲಾನನ್ನು ಕೂಡ ಪ್ರಧಾನಿ ಹುದ್ದೆಗೆ ಏರಿಸಿದೆ. 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡದಿದ್ದಕ್ಕೆ ಎಷ್ಟು ತೊಂದರೆ ಪಟ್ಟಿದ್ದೀರಿ ಅಂತಾ ನನಗೆ ಗೊತ್ತು. ಹಾಗಾಗಿ ಈಗ ಮತ್ತೆ ಅದೇ ತಪ್ಪನ್ನ ಮಾಡಬೇಡಿ ಎಂದು ಮೋದಿ ಹಿತವಚನ ನೀಡಿದರು.

ಬಡವರ ಸೇವೆ ಮಾಡುವ,  ಗಿಡಮೂಲಿಕೆಗಗಳಿಂದ ಔಷಧ ತಯಾರಿಸುವ ವ್ಯಕ್ತಿಗಳಿಗೆ, ಹರಿದ ಚಪ್ಪಲಿ ಹಾಕಿಕೊಳ್ಳುವರಿಗೂ ಪದ್ಮಶ್ರೀ ಸಿಕ್ಕಿದೆ. ಇದು ಸಾಧ್ಯವಾಗಿರುವುದು ಬಿಜೆಪಿ ಸರ್ಕಾರದಿಂದ ಮಾತ್ರ. ಕಾಂಗ್ರೆಸ್​​​ ಪಾಪಿಗಳಿಗೆ ಜನರೇ ಪಾಠ ಕಲಿಸುತ್ತಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣ ಕರ್ನಾಟಕಕ್ಕಾಗಿ ಶ್ರಮಿಸಿದವರು. ಅವರಿಗೆ ಕಾಂಗ್ರೆಸ್​​​ ಸರ್ಕಾರ ಗೌರವಿಸಿಲ್ಲ. ಕರ್ನಾಟಕದ ಮೈತ್ರಿ ಸರ್ಕಾರದ ವ್ಯಕ್ತಿಗಳು ಸೈನಿಕರನ್ನ ಪುಡಿ ರೌಡಿಗಳು ಎಂದು ಮೋದಿ ಹರಿಹಾಯ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv