‘ಹಿಂದೆ ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿತ್ತು, ಈಗ 20 ಪರ್ಸೆಂಟ್ ಸರ್ಕಾರವಿದೆ’

ಕೊಪ್ಪಳ: ಈ ದೇಶದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವವರು ಜೆಡಿಎಸ್ ಹಾಗೂ ಕಾಂಗ್ರೆಸ್​​​ನವರು ಇವರು ಕುಟುಂಬಕ್ಕೆ ಸೀಮಿತವಾಗಿದ್ದಾರೆ. ದೇಶದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಇವರು ಗುರಿ ಬರಿ ಕಮೀಷನ್ ತೆಗೆದುಕೊಳ್ಳುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಅಂಗವಾಗಿ ಕೊಪ್ಪಳ ಸುತ್ತಮುತ್ತಲ ಮೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಗೆ ಆಗಮಿಸಿದ್ದರು. ಗಂಗಾವತಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಕದಲ್ಲಿ ಹಿಂದೆ (ಕಾಂಗ್ರೆಸ್) 10 ಪರ್ಸೆಂಟ್ ಸರ್ಕಾರವಿತ್ತು. ಆದರೆ, ಈಗ ಅದು 20 ಪರ್ಸೆಂಟ್ ಸರ್ಕಾರವಾಗಿದೆ. ಕಾಂಗ್ರೆಸ್ ಮಕ್ಕಳ ಹಾಗೂ ಗರ್ಭಿಣಿಯರು ಹಣ ತಿಂದ ಸರ್ಕಾರವಾಗಿದೆ. ದೆಹಲಿಯಲ್ಲಿ ತುಘಲಕ್ ರಸ್ತೆ ಇದೆ ಅಲ್ಲಿ ಒಬ್ಬ ಶ್ರೀಮಂತನ ಮನೆ ಇದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಆ ಸರ್ಕಾರ ಕೋಟ್ಯಂತರ ರೂಪಾಯಿ ಹಣವನ್ನ ದೆಹಲಿ ಚುನಾವಣೆಗೆ ಕಳುಹಿಸಿದೆ. ಮಕ್ಕಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ಚುನಾವಣೆ ಬರುತ್ತೆ ಹೋಗುತ್ತೆ. ಆದ್ರೆ, ಮಕ್ಕಳು ಊಟದ ತಟ್ಟೆಯನ್ನು ಕಾಂಗ್ರೆಸ್ ಕಸಿದುಕೊಂಡಿದೆ ಎಂದರು.

ರಾಜ್ಯ ಸರ್ಕಾರಕ್ಕೆ ಸುಲ್ತಾನ ಉತ್ಸವ ಮಾಡುವುದಕ್ಕೆ ದುಡ್ಡಿದೆ. ಹಂಪಿ ಉತ್ಸವಕ್ಕೆ ಕೊಡುವುದಕ್ಕೆ ದುಡ್ಡು ಇಲ್ಲ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಅದನ್ನು ಮಾಡಿಲ್ಲ ಭರವಸೆ ಈಡೇರಿಸಲಿಲ್ಲ. ಆದ್ರೆ, ಈ ಚೌಕಿದಾರ್ ರೈತರಿಗೆ ಹೊಸ ಯೋಜನೆ ರೂಪಿಸಿದ್ದಾರೆ. ಅದನ್ನು ಕರ್ನಾಟಕಕ್ಕೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಅದಕ್ಕೆ ಇದೇ 23 ರಂದು ನಾವು ಸರಿಯಾಗಿ ಉತ್ತರ ಕೊಡುತ್ತೇವೆ. ಈ ಬಾರಿ ನಾವು ಗೆದ್ದ ಕೂಡಲೇ ವಿದ್ಯುತ್, ನೀರಿನ ಸೌಕರ್ಯ ಕೊಡುವ ಕೆಲಸ ಮಾಡುತ್ತೇವೆ. ಈ ಭಾಗದಲ್ಲಿ ಈಗಾಲೇ ರೈಲ್ವೆ ಅಭಿವೃದ್ಧಿ ಆಗಿವೆ. ರಾಷ್ಟ್ರೀಯ ಹೆದ್ದಾರೆಗಳು ಅಭಿವೃದ್ಧಿಯಾಗಿವೆ. ತುಂಗಾಭದ್ರದ ಅಭಿವೃದ್ಧಿ ಕೆಲಸ ಮಾಡುವೆ. ಎಲ್ಲಾ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಿಮ್ಮ‌ ಕೆಲಸ ಮತದಾನ ದಿನ ತಪ್ಪದೇ ಮತದಾನ ಮಾಡಿ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv