ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಭಾಷೆಯನ್ನೇ ಮಾತನಾಡುತ್ತಿದ್ದಾರೆ: ಪ್ರಧಾನಿ ಮೋದಿ

ಬೆಂಗಳೂರು: ಸ್ಪೇಸ್ ಸರ್ಜಿಕಲ್ ಸ್ಟ್ರೈಕ್​​ನಿಂದ ದೇಶಕ್ಕೇ ಹೆಮ್ಮೆ. ವಿಜ್ಞಾನಿಗಳ ಬಗ್ಗೆಯೂ ಹೆಮ್ಮೆ ಇದೆ. ಆದರೆ ಕಾಂಗ್ರೆಸ್​​ಗೆ ಮಾತ್ರ ಇಷ್ಟವಾಗಿಲ್ಲ. ಅವರ ಹೊಟ್ಟೆ ಉರಿಯುತ್ತಿದೆ. ತಾವು ಇದನ್ನು ಹಿಂದೆಯೇ ಮಾಡುತ್ತಿದ್ದೆವು. ಆದರೆ ಸೀಕ್ರೆಟ್ ಆಗಿ ಇಡಬೇಕಿತ್ತು ಎನ್ನುತ್ತಾರೆ. ಅದಕ್ಕೂ ಧೈರ್ಯ ಬೇಕು. ಆ ಧೈರ್ಯ ನಾವು ತೋರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದಕರ ವಿರುದ್ಧ ಅಮೇರಿಕಾ, ಇಸ್ರೇಲ್ ನುಗ್ಗಿ ಹೊಡೆಯುತ್ತದೆ. ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ನೀವು ಪ್ರಶ್ನಿಸುತ್ತಿದ್ದಿರಿ‌. ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ‌. ಇದರಿಂದ ನಿಮಗೆ ಹೆಮ್ಮೆ ಆಗಿದೆ. ದೇಶದ ಹೆಸರು ಉಚ್ಛ್ರಾಯ ಸ್ಥಿತಿಗೆ ತಲುಪಿದೆ‌. ಆದರೆ ಇದು ಮಹಾಮಿಲಾವಟ್ ನಾಯಕರಿಗೆ ಇಷ್ಟವಿಲ್ಲ. ನೀರು ಕುಡಿದು ಬಯ್ಯುತ್ತಿದ್ದಾರೆ‌. ಯುಪಿಎ ಸರ್ಕಾರದ ಅವಧಿಯಲ್ಲಿ ಹೀಗೆ ಆದಾಗ ಅವರು ಗೃಹ ಸಚಿವರನ್ನು ಬದಲಾಯಿಸಿದ್ದರು. ಆದರೆ ನಿಮ್ಮ ಮೋದಿ ಹಾಗೆ ಮಾಡಲಿಲ್ಲ. ತಂತ್ರಗಾರಿಕೆ ಬದಲಾವಣೆ ಮಾಡಿದೆವು. ಕಾಂಗ್ರೆಸ್​​ನ‌ ಪ್ರೊಸೆಸ್ಸರ್ ಮಂದವಾಗಿಲ್ಲ. ಬದಲಿಗೆ ಅವರ ಸಾಫ್ಟವೇರ್ ನಲ್ಲೇ ವೈರಸ್ ಇದೆ. ಕಾಂಗ್ರೆಸ್​​ನ‌‌ ಪ್ರಣಾಳಿಕೆಯಲ್ಲ. ಅದೊಂದು ಡಕೋಸ್ಲಾ ಪತ್ರ. ಕಾಂಗ್ರೆಸ್ಸಿಗರು ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ. ನಾಲ್ಕು‌ ಪೀಳಿಗೆಯ ರಾಜ್ಯ ಭಾರವನ್ನು ಒಬ್ಬ ಚಾಯ್ ವಾಲ ಕಸಿದುಕೊಂಡಿದ್ದಾನೆ. ಇದು ಅವರಿಗೆ ಸರಿ ಬರುತ್ತಿಲ್ಲ. ಕಾಂಗ್ರೆಸ್ ತಮ್ಮ ಡಕೋಸ್ಲಾ ಪತ್ರದಲ್ಲಿ ಸೇನಾ ವಿಶೇಷಾಧಿಕಾರವನ್ನು ತೆಗೆದು ಹಾಕುತ್ತಾರಂತೆ. ಇದನ್ನು ನೋಡಿದ್ರೆ ಕೋಪ ಬರುವುದಿಲ್ಲವೇ. ಜಮ್ಮು ಕಾಶ್ಮೀರದಲ್ಲಿ ನೂರಾರು ಸೈನಿಕರು ವೀರ ಮರಣವನ್ನಪ್ಪಿದ್ದಾರೆ. ಈಗ ಸೇನೆಯನ್ನು ನಿರ್ಬಲರನ್ನಾಗಿ ಮಾಡುತ್ತಾರಂತೆ.. ಪಾಕಿಸ್ತಾನಿ ಭಾಷೆ ಮಾತನಾಡುತ್ತಿದ್ದಾರೆ. ಕಾಶ್ಮೀರದಿಂದ ಸೇನೆಯನ್ನು ತೆಗೆಯುತ್ತಾರಂತೆ. ಪಂಡಿತ್ ನೆಹರು ಮಾಡಿದ ತಪ್ಪಿನಿಂದ ಈಗಲೂ ಅನುಭವಿಸುತ್ತಿದ್ದೇವೆ. ಈಗ ಸೇನೆಯನ್ನೂ ಹೊರಗಿಟ್ಟರೆ ಏನಾಗಬಹುದು‌. ಅವರ ಮತ್ತೊಬ್ಬ ಸಹವರ್ತಿ ದೇಶಕ್ಕೆ ಎರಡೆರಡು ಪ್ರಧಾನಿ ಮಾಡ್ತಾರಂತೆ‌. ಇಂತಹಾ ಕಾಂಗ್ರೆಸ್ ನಮಗೆ ಬೇಕೋ.. ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಬಾಡಿಗೆ ಪಡೆದ ಕೆಲವರು ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದಾರೆ‌. ಇದು ದೇಶದ್ರೋಹವಲ್ಲವೇ. ಅಂತಹವರ ಪರವಾಗಿ ನಿಲ್ಲುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಕೂಡ ದೇಶದ್ರೋಹ ಮಾಡಲು ಹೊರಟಿದೆ.

ಪಾಕಿಸ್ತಾನದ ಭಾಷೆಯನ್ನೇ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆಯಲ್ಲಿ ಠೇವಣಿ ಕೂಡ ಉಳಿಯಬಾರದು. ಅಂತಹಾ ಶಿಕ್ಷೆ ಕೊಡಬೇಕು. ಪಾಠ ಕಲಿಸಬೇಕು. 70 ವರ್ಷವಾಯ್ತು. ತಮ್ಮ ಕುಟುಂಬಸ್ಥರ ಸಮಾಧಿಗಳನ್ನು ನಿರ್ಮಿಸಿಕೊಂಡಿರುವ ಕಾಂಗ್ರೆಸ್​ನವರು ವೀರ ಸೈನಿಕರಿಗೆ ಒಂದು ವಾರ್ ಮೆಮೋರಿಯಲ್ ನಿರ್ಮಿಸದೆ ಸೈನಿಕರಿಗೆ ಅಪಮಾನ ಮಾಡಿತ್ತು. 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒನ್ ಱಂಕ್ ಒನ್ ಪೆನ್ಷನ್​ನನ್ನು ನಾವು ಈಗ ಜಾರಿಗೊಳಿಸಿದ್ದೇವೆ. ಕೇರಳದಲ್ಲಿ ಭಗವಾನ್ ಅಯ್ಯಪ್ಪನ ಹೆಸರು ಹೇಳಿದ್ರೆ ಜೈಲಿಗಟ್ಟುವುದಾಗಿ ಆದೇಶ ಹೊರಡಿಸಿದ್ದ ಕಾಂಗ್ರೆಸ್ಸಿಗರು ಈಗ ನನಗೆ ಸೈನಿಕರ ಹೆಸರು ಹೇಳದಂತೆ ಎಚ್ಚರಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ? ಎಂದು ಮೋದಿ ಸಭಿಕರನ್ನು ಪ್ರಶ್ನಿಸಿದರು.

ಡಿಜಿಟಲ್ ಕ್ರಾಂತಿ ನಮ್ಮ ಕನಸಾಗಿತ್ತು. ಈಗ ನೂರು ಕೋಟಿ ಭಾರತೀಯರ ಕೈಯಲ್ಲಿ ಐ ಫೋನ್​​ಗಳು ಬಂದಿವೆ. ಹತ್ತು ಹನ್ನೊಂದು ರೂಪಾಯಿಗಿಂತ ಕಡಿಮೆ ದರದಲ್ಲಿ ಒಂದು ಜಿಬಿ ಡೆಟಾ ಸಿಗುತ್ತಿದೆ. ಇದು ಮೋದಿಯ ಡಿಜಿಟಲ್ ಇಂಡಿಯಾ.. ನಮ್ಮ ಬೀಮ್ ಆಪ್, ರುಪೇ ಕಾರ್ಡ್​​​ ಸಿಂಗಪೂರ್​​ನಲ್ಲೂ ಚಾಲ್ತಿಯಲ್ಲಿದೆ. ಇದು ನಮ್ಮ ಡಿಜಿಟಲ್ ಇಂಡಿಯಾ. ಅದೇ ಕಾಂಗ್ರೆಸ್ಸಿಗರದ್ದು 2ಜಿ, ತ್ರೀ ಜಿ ಹಗರಣಗಳ ಕೊಡುಗೆ ಇದೆ. 4ಜಿ ಬಗ್ಗೆ ಮಾತನಾಡುತ್ತಲೇ ಹೊರಟೇ ಹೋದರು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ಸಿಗರನ್ನ ಲೇವಡಿ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv