ಕಳಸಾ-ಬಂಡೂರಿ ಹೋರಾಟಗಾರರಿಗೆ ಪ್ರಧಾನಿ ಬುಲಾವ್​

ಧಾರವಾಡ: ಕಳಸಾ-ಬಂಡೂರಿ ಹೋರಾಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಬುಲಾವ್ ನೀಡಿದ್ದಾರೆ. ಇದೇ ತಿಂಗಳ 14 ಅಥವಾ 15ಕ್ಕೆ ಮೋದಿಯನ್ನು ರೈತರ ನಿಯೋಗ ಭೇಟಿಯಾಗಲಿದೆ. ಆದರಿಂದಾಗಿ ರೈತರ ನಿಯೋಗ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದೆ.

ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದ ರೈತರ ನಿಯೋಗ ಮೋದಿಯನ್ನು ಭೇಟಿಯಾಗಲಿದ್ದಾರೆ. 4 ಜಿಲ್ಲೆಯ 9 ತಾಲೂಕಿನ 23 ರೈತರು ಮೋದಿಯನ್ನು ಭೇಟಿ ಮಾಡಲು ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv