ಬಾಲಿವುಡ್ ಕಿಲಾಡಿ ಜೊತೆ ಮೋದಿ ಮನದಾಳದ ಮಾತು..

ಬಾಲಿವುಡ್​ ಸ್ಟಾರ್​ ಅಕ್ಷಯ್​ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನ ಇಂಟರ್​ವ್ಯೂ ಮಾಡಿದ್ದಾರೆ. ರಾಜಕೀಯವನ್ನ ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಅಕ್ಷಯ್​ ಅವರೊಂದಿಗೆ ಮೋದಿ, ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಪ್ರಧಾನಿಗಳ ಬಾಲ್ಯ ಸೇರಿದಂತೆ ಬೆಳೆದ ರೀತಿ, ಕಷ್ಟ-ಸುಖಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಸಾರಂಶದ ವಿವರ ಹೀಗಿದೆ.

ಅಕ್ಷಯ್ ಕುಮಾರ್:  ನೀವು ಪ್ರಧಾನಿ ಆಗ್ತೀರಿ ಅನ್ಕೊಂಡಿದ್ರಾ?
ಪ್ರಧಾನಿ ಮೋದಿ: ಇಲ್ಲಾ, ನಾನು ಯಾವತ್ತೂ ಅಂದು ಕೊಂಡಿರ್ಲಿಲ್ಲ. ನಮ್ಮ ಫ್ಯಾಮಿಲಿ ಹಿನ್ನೆಲೆ ನೋಡಿದ್ರೆ ನಾನು ಪ್ರಧಾನಿಯಾಗುವ ಕನಸು ಸಹ ಕಂಡಿರಲಿಲ್ಲ. ನನ್ನ ವೈಯಕ್ತಿಕ ಜೀವನ ನೋಡಿದ್ರೆ ಇದು ಅಸ್ವಾಭಾವಿ ಅನ್ನಿಸುತ್ತೆ.
ಅಕ್ಷಯ್ ಕುಮಾರ್: ನಿಮಗೆ ಕೋಪ ಬರುತ್ತಾ..?
ಪ್ರಧಾನಿ ಮೋದಿ: ಕೋಪ, ಎಲ್ಲರ ಜೀವನದಲ್ಲೂ ಬರುವಂಥದ್ದು, ಆದ್ರೆ ನಾವು ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀವಿ ಅನ್ನೋದು ಮುಖ್ಯವಾಗುತ್ತೆ. ಕೋಪ ನನಗೂ ಬರುತ್ತೆ. ಆದ್ರೆ ನನ್ನೊಳಗೇ ಕೋಪ ಇರಬಹುದು. ನಾನು ಆ ಕೋಪವನ್ನ ಹೊರಗೆ ಬರಲು ಬಿಡುವುದಿಲ್ಲ, ಅಲ್ಲೇ ತಡೆಯುತ್ತೇನೆ. ನಾನು ಚಿಕ್ಕವನಿದ್ದಾಗ ಸಿಪ್ಪೆ ಸಮೇತ ಮಾವಿನ ಹಣ್ಣು ತಿನ್ನುತ್ತಿದ್ದೆ.
ಅಕ್ಷಯ್ ಕುಮಾರ್: ನೀವು ಸನ್ಯಾಸಿ ಆಗಬೇಕು ಅಂದುಕೊಂಡಿದ್ರಂತೆ..?
ಪ್ರಧಾನಿ ಮೋದಿ: ನಾನು ಸೇನೆ ಸೇರಲು ಬಯಸಿದ್ದೆ. ಅವರೊಟ್ಟಿಗೆ ರೈಲಿನಲ್ಲಿ ಹೋಗುವಾಗ ಅವರಿಗೆ ತುಂಬಾ ಗೌರವ ಸಿಗ್ತಿತ್ತು. ಅದನ್ನು ನೋಡಿ ನಾನೂ ಸೇನೆ ಸೇರಬೇಕೆಂದುಕೊಂಡಿದ್ದೆ. ಸೇನಾ ಶಾಲೆಗೆ ಸೇರಬೇಕೆಂದುಕೊಂಡಿದ್ದೆ. ಅವರಿಗೆ ಟೀ ಮಾರುತ್ತಿದ್ದೆ
ಅಕ್ಷಯ್ ಕುಮಾರ್: ನಿಮ್ಮ ಮನೆಯವರನ್ನ ನೋಡಬೇಕು ಮಾತನಾಡಿಸ ಬೇಕು ಅನ್ನಿಸೋದಿಲ್ವಾ..?
ಪ್ರಧಾನಿ ಮೋದಿ: ಇಲ್ಲ, ನಾನು ಮನೆಯವರಿಂದ ದೂರ ಉಳಿದಿದ್ದೇನೆ. ನನಗೆ ಆ ರೀತಿ ತರಬೇತಿ, ಹಾಗೂ ಅಭ್ಯಾಸ ಆಗಿದೆ. ನಾನು ಚಿಕ್ಕವಯಸ್ಸಿನಲ್ಲೇ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ಎಲ್ಲಾ ಬಾಂಧವ್ಯ ಕಳಚಿ ಹೊರ ಬಂದಿದ್ದೇನೆ. ನಾನು ಪ್ರಧಾನಿಯಾಗಿ ಮನೆಯಿಂದ ಹೊರ ಬಂದಿಲ್ಲ. ಚಿಕ್ಕವನಿದ್ದಾಗಲೇ ಮನೆಯಿಂದ ಹೊರಬಂದಿದ್ದೆ.
ಅಕ್ಷಯ್ ಕುಮಾರ್: ನಿಮ್ಮ ಅಕೌಂಟ್​ನಲ್ಲಿ ಎಷ್ಟಿದೆ..?
ಪ್ರಧಾನಿ ಮೋದಿ: ನಾನು ಚಿಕ್ಕವಯಸ್ಸಿನಲ್ಲಿ ಒಂದು ಅಕೌಂಟ್​ ಓಪನ್​ ಮಾಡಿ ಮರೆತು ಬಿಟ್ಟಿದ್ದೆ. ಆಮೇಲೆ ಅದನ್ನ ಕ್ಲೋಸ್​ ಮಾಡಿಸಲು ಬ್ಯಾಂಕ್​ ನವರೇ ನಮ್ಮ ಮನೆಗೆ ಬಂದಿದ್ದರು. ಆಮೇಲೆ ತುಂಬಾ ದಿನ ಅಕೌಂಟ್​ ಇರಲಿಲ್ಲ. ಎಂಎಲ್​ಎ ಆದಾಗ ಸಂಬಳಕ್ಕಾಗಿ ಒಂದು ಅಕೌಂಟ್​ ಮಾಡಿಸುವುದು ಅನಿವಾರ್ಯವಾಯಿತು.
ಅಕ್ಷಯ್ ಕುಮಾರ್: ನೀವು ಕೇವಲ 3-4 ಗಂಟೆ ನಿದ್ರಿಸುತ್ತೀರಾ.. ಸುಸ್ತಾಗಲ್ವಾ..?
ಪ್ರಧಾನಿ ಮೋದಿ: ನಿಜ, ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಕೂಡಾ ಇದನ್ನೇ ಕೇಳಿದ್ರು. ಆದ್ರೆ ನನಗೆ ಮೂರ್ನಾಲ್ಕು ಗಂಟೆಗಳ ಮೇಲೆ ನಿದ್ದೆಯೇ ಬರೋದಿಲ್ಲ… ನಿದ್ದೆ ಬರಲ್ಲ ಅಂದ್ರೆ ಕೆಲವರು ಮಲಗಿಕೊಂಡೇ ಕಣ್ಣು ಬಿಟ್ಟಿರುತ್ತಾರೆ. ಆದರೆ ನಾನು ಎಚ್ಚರ ಆದ ಕೂಡಲೇ ಹಾಸಿಗೆಯಿಂದ ಎದ್ದುಬಿಡುತ್ತೇನೆ.
ಅಕ್ಷಯ್ ಕುಮಾರ್: ನಿಮ್ಮ ಡ್ರೆಸ್​ ಸ್ಟೈಲ್​ ನಿಮ್ಮದಾ? ಅಥವಾ ಬೆರೆಯವರು ಹೇಳಿಕೊಟ್ರಾ..?
ಪ್ರಧಾನಿ ಮೋದಿ:  ನನ್ನ ಬಟ್ಟೆ ನಾನೇ ಒಗೆಯುತ್ತಿದ್ದೆ, ಒಮ್ಮೆ ನನ್ನ ಕುರ್ತಾ ಉದ್ದ ಆಗಿತ್ತು ಅಂತಾ ಕತ್ತರಿಸಿದ್ದೆ ಅದೇ ಫ್ಯಾಷನ್​ ಆಯ್ತು..
ಅಕ್ಷಯ್ ಕುಮಾರ್: ತಿಂಗಳ ಸಂಬಳದಲ್ಲಿ ನೀವು ನಿಮ್ಮ ತಾಯಿಗೆ ಹಣ ನೀಡುತ್ತೀರಾ?
ಪ್ರಧಾನಿ ಮೋದಿ: ಇಲ್ಲ, ನಾನು ಮನೆಗೆ ಹೋದ್ರೆ ಈಗಲೂ ನನ್ನ ತಾಯಿ ನನಗೇ ದುಡ್ಡು ಕೊಡ್ತಾರೆ. ಅವರು ಸರ್ಕಾರದ ಹಣದ ಮೇಲೆ ಯಾವತ್ತೂ ಡಿಪೆಂಡ್ ಆಗಿಲ್ಲ. ಹಾಗಂತ ನಾನು ಕುಟುಂಬವನ್ನು ನಿರ್ಲಕ್ಷಿಸಿಲ್ಲ.. ನನಗೆ ದೇಶವೇ ಕುಟುಂಬವಾಗಿದೆ. ಪ್ರಧಾನಿಯಾಗಿ ದೇಶ ಸೇವೆ ಮಾಡಲು ನನಗೆ ದೊಡ್ಡ ಅವಕಾಶ ಸಿಕ್ಕಿದೆ. ಯಾವ ಪ್ರಧಾನಿಗೂ ಸಿಗದ ಅವಕಾಶ ನನಗೆ ಸಿಕ್ಕಿದೆ. ದೇವೇಗೌಡರು ಕೂಡ ಸಿಎಂ ಆಗಿ ಪ್ರಧಾನಿ ಆದವರು. ದೇವೇಗೌಡರು ಕಡಿಮೆ ಅವಧಿಯಲ್ಲಿ ಮಾತ್ರ, ಆದ್ರೆ ನಾನು ಹೆಚ್ಚು ಕಾಲ ಸಿಎಂ ಆಗಿ ಪ್ರಧಾನಿಯಾದೆ.