ಸಿ.ಎಸ್​ ಶಿವಳ್ಳಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ನವದೆಹಲಿ: ಕರ್ನಾಟಕದ ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಟ್ವೀಟ್​ ಮಾಡಿರುವ ಮೋದಿ, ಶಿವಳ್ಳಿ ಮಾಡಿರುವ ಸಾಮಾಜಿಕ ಕಾರ್ಯಗಳಿಂದ ಕರ್ನಾಟಕದಲ್ಲಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಶಿವಳ್ಳಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗಕ್ಕೂ ಹಾಗೂ ಅವರ ಅಪಾರ ಅಭಿಮಾನಿಗಳಿಗೂ ದೇವರು ದುಃಖ ಭರಿಸುವ ಶಕ್ತಿಕೊಡಲಿ ಅಂತಾ ಟ್ವೀಟ್​​ನಲ್ಲಿ ಹೇಳಿದ್ದಾರೆ.