ಉಗ್ರರ IEDಗಿಂತ, ಪ್ರಜಾಪ್ರಭುತ್ವದ ವೋಟರ್ ID ಮೋಸ್ಟ್ ಪವರ್​ಫುಲ್-ಪ್ರಧಾನಿ ಮೋದಿ

ಅಹಮದಾಬಾದ್​​ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​​ನ ರಣಿಪ್ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನ ಚಲಾಯಿಸಿದರು. ಮತದಾನ ಮಾಡುವ ಮೊದಲು ಅಹಮದಾಬಾದ್​ಗೆ ಬಂದಿಳಿದ ಮೋದಿ, ನೇರವಾಗಿ ತಮ್ಮ ಮನೆಗೆ ಹೋಗಿ ತಾಯಿಯ ಆಶೀರ್ವಾದ ಪಡೆದರು. ನಂತರ ಬಿಜೆಪಿ ರಾಷ್ಟ್ರೀ ಅಧ್ಯಕ್ಷ ಅಮಿತ್ ಶಾ ಜೊತೆಗೂಡಿ ಮತಗಟ್ಟೆಯತ್ತ ಪ್ರಯಾಣ ಬೆಳೆಸಿದರು. ರಣಿಪ್​​ನಲ್ಲಿರುವ ನಿಶಾನ್ ಹೈಯರ್ ಸೆಕೆಂಡರಿ ಸ್ಕೂಲ್​ಗೆ ತೆರಳಿ ಮತದಾನ ಮಾಡಿದರು.

ಈ ಮಧ್ಯೆ ಪ್ರಧಾನಿ ಮೋದಿಗೆ ಸಾವಿರಾರು ಮತದಾರರು ಸಾಥ್ ನೀಡಿದರು. ಈ ವೇಳೆ ಅಮಿತ್​ ಶಾ ಅವರ ಮೊಮ್ಮಗಳನ್ನ ಎತ್ತಿಕೊಂಡು ಮತನಾಡಿಸಿದರು. ನಂತರ ವೋಟ್​ ಹಾಕಿ ಮತನಾಡಿದ ಅವರು, ದೇಶದಲ್ಲಿ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಗುಜರಾತಿನಲ್ಲಿ ನನ್ನ ಕರ್ತವ್ಯ ಪೂರೈಸುವ ಅವಕಾಶ ಸಿಕ್ಕಿದೆ. ಪ್ರಜಾಪ್ರಭುತ್ವದ ಶಕ್ತಿ ವೋಟರ್​ ಐಡಿ. ಉಗ್ರರ IEDಗಿಂತ, ಪ್ರಜಾಪ್ರಭುತ್ವದ ವೋಟರ್ ID ಮೋಸ್ಟ್ ಪವರ್​ಫುಲ್. ದೇಶದ ಎಲ್ಲ ನಾಗರಿಕರೂ ತಪ್ಪದೇ ಮತಚಲಾಯಿಸಿ ಅಂತಾ ಮನವಿ ಮಾಡಿಕೊಂಡರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv