ಚುನಾವಣಾ ಪ್ರಚಾರಕ್ಕೆ ತೆರೆ ಎಳೆದ ಮೋದಿ

ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿಂದು ತಮ್ಮ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದರು. ಈ ವೇಳೆ ಅವರು ಡ್ರಮ್​/ಡೋಲ್​​ ಬಾರಿಸುವ ಮೂಲಕ ತಮ್ಮ ಡ್ರಮ್ಮಿಂಗ್​​ ಕೌಶಲ್ಯವನ್ನ ಪ್ರದರ್ಶಿಸಿದರು. ಚುನಾವಣಾ ಪ್ರಚಾರದ ಕೊನೇ ದಿನವಾದ ಇಂದು ಮೋದಿ ದೌಸಾದಲ್ಲಿ ಱಲಿ ನಡೆಸಿದರು.  ಈ ವೇಳೆ ಮೋದಿ ದೊಡ್ಡದಾಡ ಡೋಲ್​​​​ ಬಾರಿಸಿದ್ರು . ಮೋದಿ ಡೋಲ್‌​ ಬಾರಿಸುವ ವಿಡಿಯೋವನ್ನ ಅವರ ಫೇಸ್​ಬುಕ್​ ಹಾಗೂ ಇನ್ಸ್​​ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ವಿಜಯದ ಸದ್ದು, ಅಭಿವೃದ್ಧಿ ಹಾಗೂ ಜನಾಧಿಕಾರದ ಸದ್ದು ಎಂದು ಫೇಸ್​ಬುಕ್​​​​ ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಇನ್ನು ಱಲಿಯಲ್ಲಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮುಂದುವರೆಸಿದ ಮೋದಿ, ಇದೊಂದು ಕನ್​​ಫ್ಯೂಸ್ಡ್​​ ನಾಯಕನನ್ನು ಹೊಂದಿರುವ ಕನ್​ಫ್ಯೂಸ್ಡ್​​ ಪಕ್ಷ ಎಂದರು. ಅವರಿಗೆ ಕುಂಭರಾಮ್​ ಹಾಗೂ ಕುಂಭಕರ್ಣನ ನಡುವೆ ಇರೋ ವ್ಯತ್ಯಾಸವೇ ಗೊತ್ತಿಲ್ಲ ಎಂದು ಹೇಳಿದ್ರು. ಮೊನ್ನೆ ರಾಹುಲ್ ಗಾಂಧಿ ಕುಂಭ ರಾಮ್​​ ಲಿಫ್ಟ್​ ಯೋಜನೆ ಎನ್ನುವ ಬದಲು ಕುಂಭಕರಣ ಯೋಜನೆ ಎಂದು ಹೇಳಿದ್ದಕ್ಕೆ ಮೋದಿ ಈ ಮೂಲಕ ಟಾಂಗ್​ ಕೊಟ್ರು.

The sound of victory…of development and people power!

The sound of victory…of development and people power!

Posted by Narendra Modi on Wednesday, December 5, 2018