‘ಕುಮಾರಸ್ವಾಮಿ ಸೈನ್ಯಕ್ಕೆ ಮಹಾ ಅಪಮಾನ ಮಾಡಿದ್ದಾರೆ’ ಸಿಎಂ ಹೇಳಿಕೆಗೆ ಪಿಎಂ ಆಕ್ರೋಶ

ಗಂಗಾವತಿ: ಇಂದು ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ದೇಶದ ಹಾಗೂ ರಾಜ್ಯದಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ್ರು. ಈ ಚುನಾವಣೆ ರಾಷ್ಟ್ರೀಯತೆ ಹಾಗೂ ಕುಟುಂಬ ರಾಜಕಾರಣದ ನಡೆಯುತ್ತಿರುವ ಚುನಾವಣೆ ಅಂತಾ ಹೇಳಿದ್ರು.

ಪ್ರಧಾನಿ ಮೋದಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು. ನಿನ್ನೆ ಮಾಧ್ಯಮಗಳಲ್ಲಿ ನೋಡ್ತಾ ಇದ್ದೆ ಅದ್ರಲ್ಲಿ ಕುಮಾರಸ್ವಾಮಿ, ಎರಡು ಹೊತ್ತು ಊಟಕ್ಕೆ ಗತಿ ಇಲ್ಲದೇ ಇರೋರು ಮಾತ್ರ ಸೇನೆ ಸೇರುತ್ತಾರೆ ಅಂತಾ ಹೇಳಿದ್ದಾರೆ. ಈ ಮೂಲಕ ನಮ್ಮ ಸೇನೆಯನ್ನು ಅವರು ಅವಮಾನಿಸಿದ್ದಾರೆ. ಕುಮಾರಸ್ವಾಮಿಯವರಿಗೆ ಮಾತ್ರ ಇಂತಹ ಯೋಚನೆ ಬರುತ್ತೆ ಅಂತಾ ಹೇಳಿದ್ರು. ಇದೇ ವೇಳೆ, ಕುಮಾರಸ್ವಾಮಿಯವರು ಅವರ ಮನಸಿನಲ್ಲಿ ಏನಿತ್ತೋ ಅದನ್ನೇ ಹೇಳಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು, ಬಿಸಿಲು, ಮಳೆ, ಚಳಿ ಎನ್ನದೇ ದೇಶದ ರಕ್ಷಣೆ ಮಾಡುವವರಿಗೆ ಅವಮಾನ ಮಾಡಿದ್ದಾರೆ. ಇವರೆಲ್ಲ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬಂದವರು. ಇಂತಹವರಿಂದ ದೇಶದ ರಕ್ಷಣೆ ಆಗಲ್ಲ. ಇಂತಹವರಿಂದಾಗಿಯೇ ಇಷ್ಟು ವರ್ಷಗಳ ಕಾಲ ನಮ್ಮ ಸೈನಿಕರಿಗೆ ಬುಲೆಟ್​ ಪ್ರೂಫ್ ಜಾಕೆಟ್​ ಸಿಕ್ಕಿಲ್ಲ ಅಂತಾ ಹೇಳಿದ್ರು.

ಸೈನಿಕರ ಬಗ್ಗೆ ಸಿಎಂ ಹೇಳಿದ್ದಾದರೂ ಏನು: ಊಟಕ್ಕೆ ಗತಿಯಿಲ್ಲ, ಕೆಲಸ ಇಲ್ಲ ಅಂತ ಅಂತಿಮವಾಗಿ ಯುವಕರು ಆ ಸೈನ್ಯ ಸೇರ್ತಾರೆ-ಕುಮಾರಸ್ವಾಮಿ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv