ನಾವು ಮತ್ತೆ ಅಧಿಕಾರಕ್ಕೆ ಬರ್ತೇವೆ, ರೇವಣ್ಣ ರಾಜಕೀಯ ಬಿಡ್ತಾರಾ.. ನಂಬಿಕೆ ಇದ್ಯಾ..?

ಗಂಗಾವತಿ: ಭತ್ತದ ನಾಡಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ರು. ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡುವಂತೆ ಮನವಿ ಮಾಡಿದ್ರು. ಈ ವೇಳೆ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಕುಟುಂಬಕ್ಕೆ ಟಾಂಗ್​ ನೀಡಿದ್ರು. ನಾನು ದೇಶದೆಲ್ಲೆಡೆ ಪ್ರಚಾರ ನಡೆಸುತ್ತಿದ್ದೇನೆ. ಎಲ್ಲ ಕಡೆಯೂ ಮತ್ತೊಮ್ಮೆ ಮೋದಿ.. ಮತ್ತೊಮ್ಮ ಮೋದಿ ಎಂಬ ಘೋಷ ವಾಕ್ಯ ಕೇಳಿ ಬರುತ್ತಿದೆ. ಆದ್ರೆ ಕರ್ನಾಟದಲ್ಲಿ ದೇವೇಗೌಡರ ಸುಪುತ್ರ, ಮತ್ತೆ ಮೋದಿ ಅಧಿಕಾರಕ್ಕೆ ಬರಲ್ಲ, ಹಾಗೇನಾದ್ರು ಅಧಿಕಾರಕ್ಕೆ ಬಂದ್ರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಅಂತಾ ಹೇಳಿದ್ದಾರೆ ಅಂತಾ ಸಚಿವ ಹೆಚ್​.ಡಿ ರೇವಣ್ಣರ ಹೆಸರು ಹೇಳದೇ ಟಾಂಗ್​ ನೀಡಿದ್ರು. ಇದೇ ವೇಳೆ, ಇದಕ್ಕೂ ಮೊದಲು 2014ರ ಚುನಾವಣೆಯಲ್ಲೂ ದೇವೇಗೌಡರು ಮೋದಿ ಅಧಿಕಾರಕ್ಕೆ ಬಂದ್ರೆ ದೇಶ ಬಿಡ್ತೇನೆ ಅಂತಾ ಹೇಳಿದ್ರು. ಅವರು ದೇಶ ಬಿಡಲಿಲ್ಲ, ಅವರ ಪುತ್ರ ರಾಜಕೀಯ ಬಿಡಲ್ಲ. ಬದಲಿಗೆ ಕುಟುಂಬದಲ್ಲಿರುವ ಮಕ್ಕಳಿಗೆಲ್ಲ ಟಿಕಿಟ್​ ಕೊಡ್ತಾ ಇದ್ದಾರೆ. ಅವರ ಮಾತಿನ ಮೇಲೆ ಜನರಿಗೆ ನಂಬಿಕೆ ಇಲ್ಲ ಅಂತಾ ಹೇಳಿದ್ರು.

ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ: ಹೆಚ್​.ಡಿ ರೇವಣ್ಣ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv