‘ರಾಜ್ಯದ ಮುಖ್ಯಮಂತ್ರಿ ಎಲ್ಲರ ಪಂಚಿಂಗ್ ಬ್ಯಾಗ್ ಆಗಿದ್ದಾರೆ’

ಹುಬ್ಬಳ್ಳಿ: ಕುರ್ಚಿ ಉಳಿಸಿಕೊಳ್ಳಲು ಎಲ್ಲರೂ ಹೆಣಗಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರು..? ಸರ್ಕಾರದ ನೇತೃತ್ವವನ್ನು ಯಾರು ವಹಿಸಿದ್ದಾರೆ? ಗೊತ್ತಿಲ್ಲ ಅಂತಾ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಅಸಹಾಯಕ ದೇಶ ಆಗಬಾರದು, ಬಲಿಷ್ಠ ದೇಶ ಆಗಬೇಕು
ನಗರದ ಕೆಎಲ್​ಇ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಎಲ್ಲರ ಪಂಚಿಂಗ್ ಬ್ಯಾಗ್ ಆಗಿದ್ದಾರೆ.​ ರಾತ್ರಿ ಅಳುವ ಮುಖ್ಯಮಂತ್ರಿಯ ಕೈಯಲ್ಲಿ ರಾಜ್ಯವನ್ನು ಆಳಲು ಕೊಟ್ಟಿದ್ದಾರೆ. ಇಂಥವರನ್ನು ನೋಡಿ ದೇಶ ಅಳುತ್ತಿದೆ ಅಂತಾ ವ್ಯಂಗ್ಯವಾಡಿದರು. ಕರ್ನಾಟದಲ್ಲಾಗಿರುವ ಇದೇ ಮಾದರಿಯನ್ನೇ ಕೇಂದ್ರದಲ್ಲೂ ನಿರ್ಮಿಸಲು ಹೊರಟಿದ್ದಾರೆ. ಇದನ್ನು ನೋಡಿ ಜಗತ್ತು ನಗುತ್ತದೆ. ಈ ರೀತಿಯ ವಾತಾವರಣ ನಿರ್ಮಾಣವಾಗಲು ಅವಕಾಶ ನೀಡಬಾರದು. ನಮ್ಮದು ಮಜಬೂರ್​​ ದೇಶವಾಗಬಾರದು. ಬದಲಾಗಿ ಮಜಭೂತಾದ ದೇಶವಾಗಬೇಕು ಅಂತಾ ಮೋದಿ ಮಹಾಘಟಬಂಧನ್ ವಿರುದ್ಧವೂ ವಾಗ್ದಾಳಿ ನಡೆಸಿದ್ರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv