ಪ್ರಧಾನಿ ಮೋದಿ ಟಾರ್ಗೆಟ್ಸ್ ಡಿ.ಕೆ ಶಿವಕುಮಾರ್..! ಅವರು ಹೇಳಿದ್ದೇನು?!

ಶಿವಮೊಗ್ಗ: ನಗರದಲ್ಲಿ ಇಂದು ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ನೋಟ್ ಬ್ಯಾನ್ ಬಗ್ಗೆ ಪ್ರಸ್ತಾಪಿಸಿದ್ರು. ನಾನು ಆಗ ನೋಟ್​​ ಬ್ಯಾನ್ ಮಾಡಿದ್ದನ್ನು ಕಾಂಗ್ರೆಸ್​ನವರು ಈಗಲೂ ಸ್ಮರಿಸ್ತಾ ಇರ್ತಾರೆ. ಮೋದಿ ನೋಟ್​ ಬ್ಯಾನ್​ ಮಾಡಿದರು ಎಂದು ಬೊಬ್ಬಿಡ್ತಾ ಇದ್ದಾರೆ. ಆದರೆ ನೋಟ್​ ಬ್ಯಾನ್​ ನಂತರ ಯಾವ ಯಾವ ನಾಯಕರ ಮನೆಯಲ್ಲಿ ಕೋಟಿ ಕೋಟಿಗಳಲ್ಲಿ ಹಣ ಸಿಕ್ಕಿತು ಎಂಬುದು ನಿಮಗೂ ಅರಿವಿಗೆ ಬಂದಿದೆ ಅಲ್ಲವ. ಆದರೆ ಅಂತಹ ಧನಿಕ ನಾಯಕರುಗಳಿಗೆ ಚುನಾವಣಾ ಟಿಕೆಟ್​ನ್ನು ಈಗ ನೀಡಲಾಗಿದೆ ಅಂತಾ ಹೇಳಿದ್ರು.
ಅಲ್ಲದೇ, ಒಬ್ಬ ಪ್ರಭಾವಿ ನಾಯಕರ ಬಳಿ 2013ರಲ್ಲಿ ಅಂದರೆ 5 ವರ್ಷಗಳ ಹಿಂದೆ ಇದ್ದ ಆಸ್ತಿ,  ಈಗ 800 ಕೋಟಿ ರೂಪಾಯಿಗೆ ಏರಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿಯೇ ಈ ಬಗ್ಗೆ ನಮೂದಿಸಲಾಗಿದೆ ಎಂದು ತಿಳಿಸಿದ ಪ್ರಧಾನಿ, ಎಲ್ಲಿಂದ ಬಂತು ಸ್ವಾಮಿ ಇಷ್ಟು ಹಣ? ಅಂತಾ ಮೋದಿ ಪ್ರಶ್ನಿಸಿದ್ರು. ಕಳ್ಳರನ್ನು ವಿಧಾನಸೌಧ ಒಳಕ್ಕೆ ಬಿಡುವುದಿಲ್ಲ. ಪ್ರಧಾನಿ ಮೋದಿ ತಮ್ಮ ನಾಯಕರನ್ನು ಒಳಕ್ಕೆ ಕಳುಹಿಸಲು ಎಷ್ಟೇ ಪ್ರಯತ್ನಿಸಿದರೂ ನಾವು ಅದನ್ನು ನಿಷ್ಫಲಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಅರೆ ಸ್ವಾಮಿ ಈ ಪಾಟಿ ಲೂಟಿ ಮಾಡಿದ ನಿಮ್ಮ ನಾಯಕ ಯಾವ ಕಳ್ಳರು? ಅರೆ ಭಯ್ಯಾ ಸ್ವಲ್ಪಾ ಹೇಳಿ ನೋಡೋಣ. ಅವರು ಹೇಗೆಲ್ಲಾ ಲೂಟಿ ಮಾಡಿ ಹಣ ಗಳಿಸಿದರು ಎಂಬುದನ್ನು ಜನರಿಗೆ ತಿಳಿಸಿ ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv