‘ಪ್ರಧಾನಿ ಮೋದಿ ಅಂದ್ರೆ ಪ್ರಾಮಾಣಿಕರಿಗೆ ಇಷ್ಟ, ಭ್ರಷ್ಟರಿಗೆ ಕಷ್ಟ’ ಮೋದಿ ಟಾಂಗ್

ಹುಬ್ಬಳ್ಳಿ: ಇಂದು ಪ್ರಧಾನಿ ಮೋದಿ ಅವರು, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು. ಹುಬ್ಬಳ್ಳಿಯ ಕೆಎಲ್​​ಇ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್​​ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೇನಾಮಿ ಹಣ ಗಳಿಸಿದ ಪ್ರಭಾವಿಗಳ ಹೆಸರನ್ನು ಹೇಳದೆ ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಗೆ ಟಾಂಗ್​ ಕೊಟ್ಟರು. ಬೇನಾಮಿ ಹಣ ಗಳಿಸಿದವರಿಗೆ ಮೋದಿ ಅಂದ್ರೆ ಕಷ್ಟವಾಗಿದೆ. ಇಂದು ಬೇನಾಮಿ ಹಣ ಗಳಿಸಿದವರು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಭ್ರಷ್ಟರಿಗೆ ಕಡುಕಷ್ಟವಾಗಿ ಪರಿಣಮಿಸಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್​​ನ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್​​ ವಾದ್ರಾಗೆ ಟಾಂಗ್​​ ಕೊಟ್ಟರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv