ಪ್ರಧಾನಿ ಮಠಕ್ಕೆ ಬರಲಿಲ್ಲ, ಪಲಿಮಾರುಶ್ರೀ ಬೇಸರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡ್ತಾರೆ ಅಂತ ನಿರೀಕ್ಷೆ ಇತ್ತು. ಆದ್ರೆ ಕೊನೆ ಘಳಿಗೆಯಲ್ಲಿ ಅವರು ಭೇಟಿ ನೀಡಲಿಲ್ಲ ಎಂದು ಪರ್ಯಾಯ ಪಲಿಮಾರುಶ್ರೀ ಬೇಸರ ವ್ಯಕ್ತಪಡಿಸಿದ್ರು. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತಬೇಟೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಉಡುಪಿಯಲ್ಲಿ ಭರ್ಜರಿ ಪ್ರಚಾರ ಮಾಡಿದ್ರು. ಈ ಹಿನ್ನೆಲೆ, ಉಡುಪಿಯಲ್ಲಿ ಮಾತನಾಡಿದ ಶ್ರೀಗಳು, ಪ್ರಧಾನಿ ಮೋದಿ ಅವರು ಮಠಕ್ಕೆ ಬರುತ್ತಾರೆ ಎಂದು ಹೇಳಿರಲಿಲ್ಲ. ಆದ್ರೆ, ಉಡುಪಿಗೆ ಬಂದು ಮಠಕ್ಕೆ ಬಾರದಿದ್ದದ್ದು ಸ್ವಲ್ಪ ಬೇಸರವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಅವರು ಮಠಕ್ಕೆ ಆಗಮಿಸಬಹುದು ಅಂತಾ ಸಣ್ಣಪುಟ್ಟ ಸಿದ್ಧತೆ ಮಾಡಿದ್ವಿ ಎಂದರು. ಮುಂದಿನ ದಿನಗಳಲ್ಲಿ ಪ್ರಧಾನಿ ಮಠಕ್ಕೆ ಭೇಟಿ ನೀಡಬಹುದು ಎಂಬ ನಿರೀಕ್ಷೆಯಿದೆ ಎಂದು ಶ್ರೀಗಳು ಹೇಳಿದ್ದಾರೆ.