ದುಬೈ ಆಯ್ತು ಈಗ ಮೋದಿಗೆ 1698ರಲ್ಲಿ ಸ್ಥಾಪನೆಯಾದ ರಷ್ಯಾದ ಅತ್ಯುನ್ನತ ಪ್ರಶಸ್ತಿ ಪ್ರದಾನ..!

ದೆಹಲಿ : ಪ್ರದಾನಿ ಮೋದಿಗೆ ರಷ್ಯಾದ ಅತ್ಯುನ್ನತ ಪ್ರಶಸ್ತಿಯಾದ “ಆರ್ಡರ್ ಆಫ್ ಸೇಂಟ್ ಅ್ಯಂಡ್ರೂ ದಿ ಅಪೋಸ್ಲ್ಟೇ ” ಪ್ರಶಸ್ತಿ Order of Saint Andrew the Apostle” ನೀಡಿ ಗೌರವಿಸಿದೆ. ರಷ್ಯಾ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಉತ್ತಮಗೊಳಿಸಲು ಪ್ರಧಾನಿ ಮೋದಿ ಕೊಡುಗೆಯನ್ನ ಪರಿಗಣಿಸಿ ಮೋದಿಗೆ ಪ್ರಶಸ್ತಿ ನೀಡಲಾಗಿದೆ ಎಂದು ರಷ್ಯಾ ರಾಯಭಾರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

1698ರಲ್ಲಿ ಈ ಪುರಸ್ಕಾರವನ್ನು ಸೇಂಟ್ ಆ್ಯಂಡ್ರೂ ಅವರ ಗೌರವಾರ್ಥ ಪೀಟರ್ ದಿ ಗ್ರೇಟ್ ಅನ್ನೋ ರಷ್ಯನ್ ಮಹಾರಾಜ ಸ್ಥಾಪಿಸಿದ್ದರು. ಅತ್ಯಂತ ಉನ್ನತ ಸೇವೆ ಸಲ್ಲಿಸಿದವರಿಗೆ ಮಾತ್ರ ಈ ಗೌರವ ನೀಡಲಾಗುತ್ತಿದ್ದು ಇದೇ ಮೊದಲ ಬಾರಿಗೆ ಭಾರತೀಯರೊಬ್ಬರಿಗೆ ಈ ಗೌರವ ದೊರೆತಂತಾಗಿದೆ. ಭಾರತ ಮತ್ತು ರಷ್ಯಾದ ನಾಗರೀಕರ ನಡುವೆ ವಿಶೇಷ ಮತ್ತು ಅತ್ಯಂತ ಮಹತ್ವದ ಸ್ಟ್ರಾಟಜಿಕ್ ಹಾಗೂ ಸ್ನೇಹ ಸಂಬಂಧ ವೃದ್ಧಿಸಿದ ಗೌರವಾರ್ಥ ರಷ್ಯಾ ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಗೌರವ ನೀಡಿದೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv