ಬೆಂಗಳೂರು ವಿವಿ ಕ್ಯಾಂಪಸ್​ನಲ್ಲಿ ಬೃಹತ್​ ಧ್ಯಾನ ಮಂದಿರ ನಿರ್ಮಾಣಕ್ಕೆ ಸಿದ್ಧತೆ

ಬೆಂಗಳೂರು: ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಭವನದ ಹತ್ತಿರದಲ್ಲಿ ಗೌತಮ ಬುದ್ಧನ ಹೆಸರಿನಲ್ಲಿ ಧ್ಯಾನ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಇದಕ್ಕೆ ಚಾಲನೆ ಸಿಗಲಿದೆ. ಏಕ ಕಾಲದಲ್ಲಿ ಸುಮಾರು 5,000 ಜನ ಕುಳಿತು ಇಲ್ಲಿ ಧ್ಯಾನ ಮಾಡಬಹುದಾಗಿದೆ. ಈ ಬೃಹತ್​ ಧ್ಯಾನ ಮಂದಿರದಲ್ಲಿ ಬೆಂಗಳೂರು ವಿವಿ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೂಡ ಇದರ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಪ್ರಸ್ತುತ ಜ್ಞಾನ ಭಾರತಿ ಕ್ಯಾಂಪಸ್​ನಲ್ಲಿ ಯೋಗಕ್ಕೆ ಸಂಭಂದಿಸಿದ ಡಿಪ್ಲೋಮಾ ಮತ್ತು ಸ್ನಾತಕೋತರ ಕೋರ್ಸ್​ಗಳನ್ನು ನಡೆಸಲಾಗುತ್ತಿದೆ. ಈ ಕೋರ್ಸ್​ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಧ್ಯಾನ ಮಂದಿರದ ಸ್ಥಾಪನೆಗೆ ಬೇಡಿಕೆಯಿಟ್ಟಿದ್ದರು. ಅಲ್ಲದೇ ಪ್ರತಿ ನಿತ್ಯ ಕ್ಯಾಂಪಸ್​ನಲ್ಲಿ ವಾಯುವಿಹಾರಕ್ಕೆಂದು ಸುಮಾರು 2000 ಮಂದಿ ಆಗಮಿಸುತ್ತಿದ್ದು ಅವರಿಗೂ ಈ ಧ್ಯಾನ ಮಂದಿರ ಸ್ಥಾಪನೆಯಿಂದ ಅನುಕೂಲವಾಗಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv