ಕರ್ನಾಟಕ ಬಂದ್​: ಕೋಲಾರದಲ್ಲಿ ಪ್ರತಿಭಟನೆ ವೇಳೆ ಮಾತಿನ ಚಕಮಕಿ

ಕೋಲಾರ: ರೈತರ ಸಾಲ ಮನ್ನಾಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್​ಗೆ ಬಿಜೆಪಿ ಕರೆ ನೀಡಿದೆ. ಹೀಗಾಗಿ ಕೋಲಾರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆಗೆ ಬಿಜೆಪಿ ಕಾರ್ಯಕರ್ತರು ಮುಂದಾದಾಗ, ಬಲವಂತದ ಬಂದ್ ಮಾಡದಂತೆ ಪ್ರತಿಭಟನಾಕಾರರಿಗೆ ಪೊಲೀಸರು ಸೂಚಿಸಿದ್ರು. ಹೀಗಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv