ಪಿಜ್ಜಾ ಬರ್ಲಿಲ್ಲ ಅಂತ ಪೋಲಿಸರನ್ನೇ ಕರೆಸಿಬಿಡೋದಾ..!

ಕೆನಡಾ: ನೀವು ಹೋಟೆಲ್​ಗೋ, ರೆಸ್ಟೊರೆಂಟ್​ಗೋ ಹೋಗಿ, ಫುಡ್ ಆರ್ಡರ್ ಮಾಡ್ತೀರಿ. ಅದು ರೆಡಿಯಾಗಿ ಬರೋವರೆಗೂ ಕಾಯ್ತಾ ಕೂತಿರ್ತೀರಿ ಅಲ್ವಾ? ಇಂಥ ಟೈಮ್​ನಲ್ಲಿ ಆ ಫುಡ್ ಐಟಮ್ಸ್ ಬರೋದು ಸ್ವಲ್ಪ ಲೇಟ್ ಆದ್ರೆ, ಏನ್ಮಾಡ್ತೀರಿ. ಅಲ್ಲಿನ ವೇಟರ್ನೋ, ಅಥವಾ ಇತರೆ ಸಿಬ್ಬಂದಿಯನ್ನೋ ವಿಚಾರಿಸ್ತೀರಿ. ಹೆಚ್ಚಂದ್ರೆ, ಫುಡ್ ತಂದುಕೊಟ್ಟಾಗ, ಏನ್ ಗುರು ಇಷ್ಟ್ ಲೇಟಾ ಅಂತ ಬೇಸರ ಕೂಡ ವ್ಯಕ್ತಪಡಿಸಬಹುದೇನೋ..? ಆದ್ರೆ, ಯಾವತ್ತಾದ್ರೂ ಆರ್ಡರ್ ಮಾಡಿದ ಫುಡ್ ಲೇಟ್ ಆಯ್ತು ಅಂತ ಪೊಲೀಸರನ್ನ ಕರೆಸಿದ್ದಿರಾ..? ಹಂಗೂ ಮಾಡ್ಬೋದಾ ಅಂತ ಆಶ್ಚರ್ಯ ಆಗ್ತಿದೆಯಾ..? ಮಾಡ್ಬೋದು, ಮಾಡಬಹುದು ಏನು..? ಒಬ್ಬ ಮಹಿಳೆ ಅದೇ ಕೆಲಸ ಮಾಡಿದ್ದಾಳೆ ಅಂದ್ರೆ ನಂಬಲೇಬೇಕು.

ಕೆನಡಾದಲ್ಲಿ 34 ವರ್ಷದ ಮಹಿಳೆಯೊಬ್ಬಳು 10 ವರ್ಷದ ಮಗನ ಜೊತೆ ರೆಸ್ಟೊರೆಂಟ್​ಗೆ ಹೋಗಿದ್ದಳು. ಅಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆದ್ರೆ, ಆರ್ಡರ್ ಕೊಟ್ಟು ಸುಮಾರು ಹೊತ್ತಾದ್ರೂ ತಮ್ಮ ಫುಡ್ ಐಟಂ ಬಂದಿಲ್ಲ. ಕಾದೂ ಕಾದು ಸುಸ್ತಾದ ಮಹಿಳೆ ಡೈರೆಕ್ಟಾಗಿ ಪೊಲೀಸರಿಗೆ ಫೋನ್ ಮಾಡಿ ಕರೆಸಿಯೇ ಬಿಟ್ಟಿದ್ದಾಳೆ. ಸಡನ್ ಆಗಿ ಪೊಲೀಸರು ಎಂಟ್ರಿ ಕೊಟ್ಟಿದ್ದನ್ನ ನೋಡಿ ರೆಸ್ಟೊರೆಂಟ್ ಸಿಬ್ಬಂದಿ ಶಾಕ್ ಆದ್ರೆ, ಮಹಿಳೆ ತಮ್ಮನ್ನ ಕರೆಸಿದ್ದು ಯಾಕೆ ಅಂತ ಕೇಳಿ, ಪೊಲೀಸರೂ ತಬ್ಬಿಬ್ಬಾಗಿದ್ದಾರೆ. ಆಮೇಲೆ, ಇಂಥ ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸರನ್ನ ಉಪಯೋಗಿಸಕೊಳ್ಳಬೇಡಿ ಎಂದು ಮಹಿಳೆಗೆ ಖಡಕ್ ವಾರ್ನಿಂಗ್ ಕೊಟ್ಟು ಹೋಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡಿನಲ್ಲಿ ಮಹಿಳೆಯೊಬ್ಬಳು ತಾನು ತಂದಿರುವ ಮೊಟ್ಟೆಗಳಲ್ಲಿ ಒಂದು ಮೊಟ್ಟೆ ಒಡೆದಿದೆ ಎಂದು ಎಮರ್ಜೆನ್ಸಿ ನಂಬರ್​ಗೆ ಕರೆ ಮಾಡಿದ ಬಗ್ಗೆ ವರದಿಯಾಗಿತ್ತು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv