ನವದೆಹಲಿ: ರೇಲ್ವೆ ಸಚಿವ ಪಿಯೂಷ್ ಗೋಯಲ್ ನಿನ್ನೆ ಭಾರತದ ಫಾಸ್ಟೆಸ್ಟ್ ರೈಲಿನ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿರೋದು ಸುಳ್ಳು ಎಂದು ಕಾಂಗ್ರೆಸ್ ಟೀಕಿಸಿದೆ. ಈ ವಿಡಿಯೋ ಮೂಲಕ ಗೋಯಲ್ ಸುಳ್ಳು ಹೇಳ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.
‘ಇದೊಂದು ಪಕ್ಷಿ, ಇದೊಂದು ವಿಮಾನ. ಮೇಕ್ ಇನ್ ಇಂಡಿಯಾ ಅಡಿ ತಯಾರಾದ ಭಾರತದ ಮೊದಲ ಸೆಮಿ-ಹೈ ಸ್ಪೀಡ್ ರೈಲು ಇಲ್ಲಿದೆ ನೋಡಿ. ಬೆಳಕಿನ ವೇಗದಲ್ಲಿ ಸಾಗುತ್ತಿರೋ ವಂದೇ ಭಾರತ್ ಎಕ್ಸ್ಪ್ರೆಸ್’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ರೈಲು ಸಾಗೋ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ಇದು ಮಿಸ್ಟರ್ ಗೋಟಾಲಾ ಅವರ ಸುಳ್ಳು ಎಂದು ಕಾಂಗ್ರೆಸ್ ಟೀಕಿಸಿದೆ. ವಿಡಿಯೋದಲ್ಲಿ ಫ್ರೇಮ್ ಸ್ಪೀಡ್ ಜಾಸ್ತಿ ಮಾಡಲಾಗಿದೆ. ಹೀಗಾಗಿ ರೈಲು ಅಷ್ಟು ವೇಗವಾಗಿ ಬರುತ್ತಿರುವಂತೆ ಕಾಣುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಖೂಷ್ಬು ಟ್ವೀಟ್ ಮಾಡಿದ್ದಾರೆ. ಈ ರೀತಿ ಎಡಿಟ್ ಮಾಡಿದ್ರೆ ಶತಾಬ್ದಿ ಎಕ್ಸ್ಪ್ರೆಸ್ ಕೂಡ ಇಷ್ಟೇ ವೇಗವಾಗಿ ಬರುತ್ತಿರುವಂತೆ ಕಾಣುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಆದ್ರೆ ಇನ್ನೂ ಕೆಲವರು ಗೋಯಲ್ ಅವರ ಬೆನ್ನಿಗೆ ನಿಂತಿದ್ದು, ಫೆ. 15ರಂದು ವಂದೇ ಭಾರತ್ ಎಕ್ಸ್ಪ್ರೆಸ್ ಲೋಕಾರ್ಪಣೆಗೊಳ್ಳಲಿದೆ. ವಿಡಿಯೋ ಫಾಸ್ಟ್ ಫಾರ್ವಾರ್ಡ್ ಮಾಡಲಾಗಿದೆ ಅಂತ ಹೇಳುತ್ತಿರುವವರು ಟಿಕೆಟ್ ಖರೀದಿಸಿ ನೀವಾಗೇ ಆ ಸ್ಪೀಡ್ನ ಅನುಭವ ಪಡೆಯಿರಿ ಎಂದು ಕಮೆಂಟ್ ಮಾಡಿದ್ದಾರೆ.
Tch tch tch..how much more the BJP will stoop..Piyush ji this is digital India, dream of #RajivGandhiji..if you increase the frame speed it will clearly give away as it does here..don’t try too hard..truth is not your cup of tea..PM ji should know better Na?? 😜😜 https://t.co/HbBTPcGUiz
— Khushbu Sundar.. (BJPwaalon ab thoda araam karlo) (@khushsundar) February 10, 2019
ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ ಟ್ರೇನ್ 18 ಭಾರತದ ಅತೀ ವೇಗವಾದ ರೈಲು. ಗಂಟೆಗೆ 180 ಕಿ.ಮೀ ವೇಗದಲ್ಲಿ ಈ ರೈಲು ಚಲಿಸುತ್ತದೆ. ಈ ರೈಲಿಗೆ ಯಾವುದೇ ಎಂಜಿನ್ ಇಲ್ಲ. ಫೆಬ್ರವರಿ 15ರಂದು ರೈಲು ಲೋಕಾಪರ್ಣೆಗೊಳ್ಳಲಿದ್ದು, ದೆಹಲಿಯಿಂದ ವಾರಣಾಸಿವರೆಗೆ ಮೊದಲ ಸಂಚಾರ ನಡೆಸಲಿದೆ.
ಇದನ್ನೂ ಓದಿ: ಶತಾಬ್ದಿಗಿಂತಲೂ ಫಾಸ್ಟ್, 360 ಡಿಗ್ರಿ ತಿರುಗೋ ಸೀಟ್ಸ್: ಭಾರತದ ಫಾಸ್ಟೆಸ್ಟ್ ಟ್ರೇನ್ನಲ್ಲಿ ಇನ್ನೇನೇನಿದೆ?
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv