ಭಾರತದ ಫಾಸ್ಟೆಸ್ಟ್​ ರೈಲಿನ ವಿಡಿಯೋ ಎಡಿಟೆಡ್​​, ಗೋಯಲ್ ರೈಲು ಬಿಡ್ತಿದ್ದಾರೆ ಎಂದ ಕಾಂಗ್ರೆಸ್​

ನವದೆಹಲಿ: ರೇಲ್ವೆ ಸಚಿವ ಪಿಯೂಷ್​ ಗೋಯಲ್​​ ನಿನ್ನೆ ಭಾರತದ ಫಾಸ್ಟೆಸ್ಟ್​​ ರೈಲಿನ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿರೋದು ಸುಳ್ಳು ಎಂದು ಕಾಂಗ್ರೆಸ್​ ಟೀಕಿಸಿದೆ. ಈ ವಿಡಿಯೋ ಮೂಲಕ ಗೋಯಲ್​ ಸುಳ್ಳು ಹೇಳ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

‘ಇದೊಂದು ಪಕ್ಷಿ, ಇದೊಂದು ವಿಮಾನ. ಮೇಕ್​ ಇನ್​ ಇಂಡಿಯಾ ಅಡಿ ತಯಾರಾದ ಭಾರತದ ಮೊದಲ ಸೆಮಿ-ಹೈ ಸ್ಪೀಡ್​ ರೈಲು ಇಲ್ಲಿದೆ ನೋಡಿ. ಬೆಳಕಿನ ವೇಗದಲ್ಲಿ ಸಾಗುತ್ತಿರೋ ವಂದೇ ಭಾರತ್​ ಎಕ್ಸ್​​ಪ್ರೆಸ್’ ಎಂದು ಗೋಯಲ್​​ ಟ್ವೀಟ್​ ಮಾಡಿದ್ದಾರೆ. ಇದರ ಜೊತೆಗೆ ರೈಲು ಸಾಗೋ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ಇದು ಮಿಸ್ಟರ್​​ ಗೋಟಾಲಾ ಅವರ ಸುಳ್ಳು ಎಂದು ಕಾಂಗ್ರೆಸ್​ ಟೀಕಿಸಿದೆ. ವಿಡಿಯೋದಲ್ಲಿ ಫ್ರೇಮ್​​ ಸ್ಪೀಡ್​ ಜಾಸ್ತಿ ಮಾಡಲಾಗಿದೆ. ಹೀಗಾಗಿ ರೈಲು ಅಷ್ಟು ವೇಗವಾಗಿ ಬರುತ್ತಿರುವಂತೆ ಕಾಣುತ್ತದೆ ಎಂದು ಕಾಂಗ್ರೆಸ್​​​ ವಕ್ತಾರೆ ಖೂಷ್ಬು ಟ್ವೀಟ್​ ಮಾಡಿದ್ದಾರೆ. ಈ ರೀತಿ ಎಡಿಟ್​ ಮಾಡಿದ್ರೆ ಶತಾಬ್ದಿ ಎಕ್ಸ್​ಪ್ರೆಸ್​ ಕೂಡ ಇಷ್ಟೇ ವೇಗವಾಗಿ ಬರುತ್ತಿರುವಂತೆ ಕಾಣುತ್ತದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಆದ್ರೆ ಇನ್ನೂ ಕೆಲವರು ಗೋಯಲ್​​​​​ ಅವರ ಬೆನ್ನಿಗೆ ನಿಂತಿದ್ದು, ಫೆ. 15ರಂದು ವಂದೇ ಭಾರತ್​ ಎಕ್ಸ್​​ಪ್ರೆಸ್​​ ಲೋಕಾರ್ಪಣೆಗೊಳ್ಳಲಿದೆ. ವಿಡಿಯೋ ಫಾಸ್ಟ್​ ಫಾರ್ವಾರ್ಡ್​ ಮಾಡಲಾಗಿದೆ ಅಂತ ಹೇಳುತ್ತಿರುವವರು ಟಿಕೆಟ್​ ಖರೀದಿಸಿ ನೀವಾಗೇ ಆ ಸ್ಪೀಡ್​ನ ಅನುಭವ ಪಡೆಯಿರಿ ಎಂದು ಕಮೆಂಟ್​ ಮಾಡಿದ್ದಾರೆ.

ವಂದೇ ಭಾರತ್​​ ಎಕ್ಸ್​ಪ್ರೆಸ್​ ಅಥವಾ ಟ್ರೇನ್​ 18 ಭಾರತದ ಅತೀ ವೇಗವಾದ ರೈಲು. ಗಂಟೆಗೆ 180 ಕಿ.ಮೀ ವೇಗದಲ್ಲಿ ಈ ರೈಲು ಚಲಿಸುತ್ತದೆ. ಈ ರೈಲಿಗೆ ಯಾವುದೇ ಎಂಜಿನ್​​ ಇಲ್ಲ. ಫೆಬ್ರವರಿ 15ರಂದು ರೈಲು ಲೋಕಾಪರ್ಣೆಗೊಳ್ಳಲಿದ್ದು, ದೆಹಲಿಯಿಂದ ವಾರಣಾಸಿವರೆಗೆ ಮೊದಲ ಸಂಚಾರ ನಡೆಸಲಿದೆ.

ಇದನ್ನೂ ಓದಿ: ಶತಾಬ್ದಿಗಿಂತಲೂ ಫಾಸ್ಟ್​​, 360 ಡಿಗ್ರಿ ತಿರುಗೋ ಸೀಟ್ಸ್​​: ಭಾರತದ ಫಾಸ್ಟೆಸ್ಟ್​​ ಟ್ರೇನ್​​​ನಲ್ಲಿ ಇನ್ನೇನೇನಿದೆ? 

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv