ಪಿಯರ್ ಲೈಟ್ ಲೈನರ್ಸ್ ಕಂಪನಿ ಕಾರ್ಮಿಕರ ಪ್ರೊಟೆಸ್ಟ್

ಶಿವಮೊಗ್ಗ: ವಾಹನಗಳ ಬಿಡಿ ಭಾಗಗಳ ತಯಾರಿಕಾ ಸಂಸ್ಥೆಯಾದ ಪಿಯರ್ ಲೈಟ್ ಲೈನರ್ಸ್​ನಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಇಂದು ಮುಷ್ಕರ ನಡೆಸಿದ್ದಾರೆ.
ತಮಗೆ ವೇತನದಲ್ಲಿ ತಾರತಮ್ಯ ಮಾಡ್ತಿದ್ದಾರೆ. ಅಗತ್ಯಕಿಂತ ಹೆಚ್ಚು ಸಮಯ ನಮ್ಮಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರೂ ಒಟಿ ವೇತನ ಸರಿಯಾಗಿ ನೀಡುತ್ತಿಲ್ಲ. ಕಳೆದ 25 ವರ್ಷಗಳಿಂದ ನಾವು ಈ ಕಂಪನಿಯಲ್ಲಿ ಕೆಲಸಾ ಮಾಡ್ತಿದ್ದೇವೆ. ನಮಗೆ ಕೆಲಸ ಕಾಯಂ ಮಾಡಿಲ್ಲಾ. ವಾರದ ಏಳೂ ದಿನ ಕೆಲಸ ಮಾಡಿಸಿಕೊಳ್ತಾರೆ. ಒಂದು ದಿನ ರಜೆ ಹಾಕಿದ್ರೂ ನಮ್ಮ ವೇತನ ಕಟ್ಟ ಮಾಡ್ತಾರೆ ಎಂದು ಆರೋಪಿಸಿದ್ರು. ತಮ್ಮ ಈ ಎಲ್ಲ ಬೇಡಿಕೆಗಳನ್ನೂ ಆಡಳಿತ ಮಂಡಳಿ ಈಡೇರಿಸದ ಹೊರತು ತಾವು ಕೆಲಸಕ್ಕೆ ಬರೋದಿಲ್ಲಾ ಎಂದು ಸಂಸ್ಥೆಯ ಮುಂಭಾಗದಲ್ಲಿ ಪ್ರತಿಭಟನೆಗೆ ಮಾಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv