ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮ ಪಂಚಾಯತ್​​​​​ಗೆ ಮುತ್ತಿಗೆ

ಯಾದಗಿರಿ: ಕುಡಿಯುವ ನೀರನ್ನು ಒದಗಿಸುವಂತೆ ಶಹಾಪೂರ ತಾಲೂಕಿನ ಚಾಮನಾಳ ಗ್ರಾಮ ಪಂಚಾಯತ್​​​​ಗೆ ಚಾಮರಾಳ ತಾಂಡದ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ಕಳೆದ 6 ತಿಂಗಳಿಂದ ಚಾಮನಾಳ ತಾಂಡಾದಲ್ಲಿ‌ ಕುಡಿಯುವ‌ ನೀರಿಗಾಗಿ ಗ್ರಾಮಸ್ಥರು ಪರದಾಟಡುತ್ತಿದ್ದರು. ಈ ಕುರಿತು ಗ್ರಾಮ ಪಂಚಾಯತ್​​ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಅಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪಂಚಾಯತಿಗೆ ಮುತ್ತಿಗೆ ಹಾಕಲಾಗಿದೆ. ಪಿಡಿಒ ವಿರುದ್ಧ ಚಾಮನಾಳ ತಾಂಡಾದ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಮುತ್ತಿಗೆ ಹಾಕಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv