ವಿಮಾನ ಲ್ಯಾಂಡಿಂಗ್ ವೇಳೆ ದುಸ್ಸಾಹಸ: ಸ್ಟಂಟರ್​ಗಳ ಪೋಸ್​​ಗೆ ಬೆಚ್ಚಿದ ಜನ..!

ಮಾಹೋ ಬೀಚ್.. ಉತ್ತರ ಪೂರ್ವ ಕೆರಿಬಿಯನ್‌ನ ಸೈಂಟ್ ಮಾರ್ಟಿನ್ ದ್ವೀಪದಲ್ಲಿರುವ ಈ ಬೀಜ್, ಪ್ಲೇನ್ ಸ್ಪಾಟಿಂಗ್ ಲೋಕೇಷನ್ ಅಂತಲೇ ಪ್ರಸಿದ್ಧಿ. ಕಡಲ ತೀರ ಪ್ರದೇಶದ ಮೇಲ್ಗಡೆಯಾಗಿ ವಿಮಾನಗಳು ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗುವ ವೇಳೆ ಇಬ್ಬರು ಸ್ಟಂಟರ್​ಗಳು ಜೀವಭಯವನ್ನೇ ಲೆಕ್ಕಿಸದೇ ಸಾಹಸ ಒಂದನ್ನ ಮಾಡಿ ಇದೀಗ ಸುದ್ದಿ ಆಗಿದ್ದಾರೆ.

ಇಲ್ಲಿನ ಪ್ರಿನ್ಸಸ್ ಜೂಲಿಯಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಗೋ ವಿಮಾನವೊಂದು ಲ್ಯಾಂಡ್ ಆಗುತ್ತಿತ್ತು. ಈ ವೇಳೆ ಇಬ್ಬರು ದುಸ್ಸಾಹಸಿಗರು ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಸ್ಟಂಟ್​ ಒಂದನ್ನ ಮಾಡಿದ್ದಾರೆ. ಯುಲಿಲಾ ನೊಸ್ ಅನ್ನೋ ಮಹಿಳೆ ತನ್ನ ಪಾರ್ಟನರ್​​ ಜೊತೆ ಸ್ಟಂಟ್ ಮಾಡಿದ್ದಾಳೆ. ಕಾರ್ಗೋ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ಆಕೆಯ ಪಾರ್ಟನರ್​​ ಎದ್ದು ನಿಂತಿದ್ದಾರೆ. ಈ ವೇಳೆ ಯುಲಿಲಾ, ತನ್ನ ಪಾರ್ಟನರ್​ ತಲೆಯ ಮೇಲೆ ಒಂದು ಕೈಯಿಟ್ಟು ತಲೆ ಕೆಳಗಾಗಿ ನಿಂತು ಪೋಸ್ ನೀಡಿದ್ದಾಳೆ. ಆಗ ಕಾರ್ಗೋ ವಿಮಾನ ಆಕೆಯ ಕಾಲಿಗೆ ತಾಗುವಷ್ಟು ಹತ್ತಿರಕ್ಕೆ ಪಾಸ್ ಆಗಿದೆ. ಈ ದೃಶ್ಯವನ್ನ ಫೋಟೋಗ್ರಾಫರ್ ಒಬ್ಬರು ಸೆರೆ ಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ದುಸ್ಸಾಹಸ ಮಾಡಿದ ಸ್ಟಂಟರ್​ಗಳ ವಿರುದ್ಧ ಟೀಕೆಗಳು ಕೂಡ ವ್ಯಕ್ತವಾಗಿದೆ.