ದೇವರು ಮೂರ್ಖನಾ..? ಶಾಂತಂ ಪಾಪಂ..!

ಮನಿಲ(ಫಿಲಿಫೈನ್ಸ್​): ಯಾರದು ಮೂರ್ಖ ದೇವರು? ಇದು ನಮ್ಮ ಪ್ರಶ್ನೆಯಲ್ಲ. ಫಿಲಿಫೈನ್ಸ್​ ಅಧ್ಯಕ್ಷ ರೋಡ್ರಿಗೋ ಡುಟರ್ಟೆಯ ಪ್ರಶ್ನೆ. ಹೀಗೆ ಕೇಳಿರೋ ಆತನ ವಿರುದ್ಧ ದೇಶದ 80 ಪರ್ಸೆಂಟ್​ ಮಂದಿ ತಿರುಗಿಬಿದ್ದದ್ದಾರೆ.

ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡ್ರು ಅನ್ನೋ ಗಾದೆ ಮಾತಿನಂತಾಗಿದೆ ಫಿಲಿಫೈನ್ಸ್​ನ ಅಧ್ಯಕ್ಷರ ಕಥೆ. ಕಳೆದ ಶುಕ್ರವಾರ ಫಿಲಿಫೈನ್ಸ್​ ಅಧ್ಯಕ್ಷ ರೋಡ್ರಿಗೊ ಡುಟೆರ್ಟೆ ಭಾಷಣವೊಂದರಲ್ಲಿ ಬೈಬಲ್​ ಕುರಿತಾಗಿ ಮಾತನಾಡ್ತಿದ್ದರಂತೆ. ದೇವಱಕೆ ಌಡಂ ಮತ್ತು ಈವ್​ರನ್ನು ಸೃಷ್ಠಿಸಿದ. ಮತ್ತವರಲ್ಲಿ ಟೆಮ್ಟೇಷನ್​ ಯಾಕೆ ಹುಟ್ಟಿಸಿದ ಅಂತಾ ಪ್ರಶ್ನಿಸಿದ್ದಾರೆ. ಪರಿಪೂರ್ಣತೆಯನ್ನ ಸೃಷ್ಟಿಸಿರುವ ದೇವರ ನಂತರದ ಆಲೋಚನೆ ಆತನ ಸೃಷ್ಟಿಯನ್ ಪ್ರಲೋಭನೆಗೊಳಿಸುತ್ತದೆ ಮತ್ತು ನಾಶಗೊಳಿಸುತ್ತದೆ ಎಂದಿದ್ದಾರೆ. ಮೇಲಾಗಿ “ಹೂ ಈಸ್​ ದಿಸ್​ ಸ್ಟುಪ್ಪಿಡ್​ ಗಾಡ್​ ” ಎಂದಿದ್ದರು.

ಈ ಮಾತು ಇದೀಗ ಅಧ್ಯಕ್ಷರಿಗೆ ತಲೆನೋವುಂಟುಮಾಡಿದೆ. ಡುಟೆರ್ಟೆಯ ಈ ಮಾತಿಗೆ ರಾಷ್ಟ್ರಾದ್ಯಂತ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಫಿಲಿಫೈನ್ಸ್​ನ ಕ್ಯಾಥೋಲಿಕ್​ ಚರ್ಚ್​ನ ನಾಯಕರು ಕೂಡಾ ಈ ಹೇಳಿಕೆಯನ್ನು ಖಂಡಿಸಿದ್ದು, ಅಧ್ಯಕ್ಷರಿಗೆ ಕ್ಯಾಥೋಲಿಕ್​ ಧರ್ಮದ ಮೇಲೆ ಗೌರವ ಇದ್ದಂತೆ ಕಾಣುತ್ತಿಲ್ಲ. ಇಂತವರು ಹೇಗೆ ಫಿಲಿಫೈನ್ಸ್​ನ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.