ಆನ್​ಲೈನ್​ ವಾರ್​​ನಲ್ಲಿ ಪ್ಯೂಡೈಪೈ ವಿರುದ್ಧ ಟಿ-ಸಿರೀಸ್​ಗೆ ಗೆಲುವು..!

ನವದೆಹಲಿ: ಪ್ಯೂಡೈಪೈ ವರ್ಸಸ್​​ ಟಿ-ಸಿರೀಸ್​ ವಾರ್​ನಲ್ಲಿ ಕೊನೆಗೂ ಟಿ-ಸಿರೀಸ್​ ಸಂಸ್ಥೆ ವಿನ್​ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಪ್ಯೂಡೈಪಪೈ ಎರಡು ಹಾಡುಗಳನ್ನ ಇಂಡಿಯನ್ ಯುಟ್ಯೂಬ್​ನಲ್ಲಿ ಬಿಟ್ಟಿತ್ತು. ಇದು ಟಿ-ಸಿರೀಸ್​ ಮಾರ್ಕೆಟ್​ಗೆ ಲೈಟ್​ ಆಗೇ ಏಟು ಕೊಟ್ಟಿತ್ತು. ಇದನ್ನ ಸೈಲೆಂಟಾಗೇ ಅರಿತ ಟಿ-ಸಿರೀಸ್​, ಪ್ಯೂಡೈಪಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿತ್ತು. ಪ್ಯೂಡೈಪೈ Congratulations​​ ಮತ್ತು B*tch Lasagna ಎಂಬ ಎರಡು ಹಾಡುಗಳನ್ನ ಭಾರತೀಯ ಯುಟ್ಯೂಬ್​ನಲ್ಲಿ ರಿಲೀಸ್​ ಮಾಡಿತ್ತು. ಇದರಲ್ಲಿ ಪುನರಾವರ್ತಿತ ನಿಂದನೀಯ, ಅಸಭ್ಯ ಮತ್ತು ಜನಾಂಗೀಯ ಕಮೆಂಟ್​ಗಳಿವೆ ಎಂದು ಟಿ-ಸಿರೀಸ್​​ ವಾದಿಸಿ ಪ್ಯೂಡೈಪೈ ವಿರುದ್ಧ ಕೇಸ್​ ದಾಖಲಿಸಿತ್ತು. ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​​, ಇದು ಭಾರತೀಯರ ಭಾವನೆಗಳಿಗೆ ಧಕ್ಕೆ ಬರುವಂತಿದೆ. ಇದನ್ನ ಶೀಘ್ರ ತೆಗೆದುಹಾಕಿ ಎಂದು ಆದೇಶಿಸಿ, ವಿಚಾರಣೆಯನ್ನ ಜುಲೈ 15ಕ್ಕೆ ಮುಂದೂಡಿದೆ. ಕೋರ್ಟ್​​ ವಾರ್ನ್​ ಬಳಿಕ ಎಚ್ಚೆತ್ತ ಭಾರತೀಯ ಯುಟ್ಯೂಬ್​, ಸ್ವೀಡನ್​​ನ ಪ್ಯೂಡೈಪೈನ ಎರಡೂ ಸಾಂಗ್ಸ್​ಗಳನ್ನ ತೆಗೆದುಹಾಕಿದೆ.

ಯಟ್ಯೂಬ್​ನಲ್ಲಿ ಪ್ಯೂಡೈಪೈ ಹಾಗೂ ಟಿ-ಸಿರೀಸ್ ನಡುವೆ ಭರ್ಜರಿ ಕಾಂಪಿಟೇಷನ್ ಏರ್ಪಟ್ಟಿದೆ. ಇತ್ತೀಚಿಗೆ ಭಾರತದ ಟಿ-ಸಿರೀಸ್​ ಸಂಸ್ಥೆ ಯೂಟ್ಯೂಬ್​ನಲ್ಲಿ ಅತೀ ಹೆಚ್ಚು ಸಬ್​ಸ್ಕ್ರೈಬರ್ಸ್ ಹೊಂದುವ ಮೂಲಕ ಪ್ಯೂಡೈಪೈನ ಹಿಂದಿಕ್ಕಿತ್ತು. ಆಗಿನಿಂದಲೂ ಪ್ಯೂಡೈಪೈ ಶತಾಯ ಗತಾಯ ಮತ್ತೆ ಮೊದಲ ಸ್ಥಾನಕ್ಕೆ ಬರೋಕೆ ಇಂಥ ಕುತಂತ್ರಗಳನ್ನ ಮಾಡುತ್ತಲೇ ಇದೆ.