ತನ್ನೊಡೆಯನ ಕುಟುಂಬದ ಜೀವ ಉಳಿಸಿದ ಪಿಟ್​ಬುಲ್​ ಡಾಗ್​

ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅಷ್ಟೇ ಅಲ್ಲ, ಮನುಷ್ಯನ ಬೆಸ್ಟ್ ಫ್ರೆಂಡ್ ಕೂಡ ಶ್ವಾನವೇ ಅಂತಾರೆ. ಒಂದು ತುತ್ತು ಅನ್ನ ಕೊಟ್ರೆ, ನಾಯಿ ನಿಯತ್ತಿನಿಂದ ಮನೆ ಕಾಯುತ್ತೆ ಅಂತಾರೆ. ಆದ್ರೆ, ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಶ್ವಾನವೊಂದು ಬರೀ ಮನೆ ಕಾಯೋದಷ್ಟೇ ಅಲ್ಲ, ತನ್ನ ಮಾಲೀಕರ ಜೀವವನ್ನೂ ಕಾಯುತ್ತಿದೆ.
ನ್ಯೂಯಾರ್ಕ್​ನ ಮನೆಯೊಂದರಲ್ಲಿ ಅದರ ಮಾಲೀಕರು, ತಾವು ಸಾಕಿರುವ ಪಿಟ್​ಬುಲ್ ತಳಿಯ ಶ್ವಾನ ಸ್ಯಾಡಿಯೊಂದನ್ನೇ ಬಿಟ್ಟು ಎಲ್ಲಿಗೋ ಹೋಗಿದ್ದರು. ಆಗ ಅವಘಡವೊಂದು ನಡೆದಿದೆ. ಮನೆಯ ಬೇಸ್​ಮೆಂಟ್​ನಲ್ಲಿ ಗ್ಯಾಸ್ ಲೀಕ್ ಆಗಿದೆ. ಇದನ್ನ ಅರಿತ ಸ್ಯಾಡಿ, ಬೇಸ್​ಮೆಂಟ್​ಗೆ ಹೋಗಿ ಬೊಗಳೋಕೆ ಶುರು ಮಾಡಿದೆ. ಅಷ್ಟಕ್ಕೆ ಸುಮ್ಮನಾಗದೆ ಮನೆ ಹೊರಗೂ ಬಂದು ಜೋರಾಗಿ ಬೊಗಳಿದೆ. ಇದನ್ನ ಕೇಳಿಸಿಕೊಂಡ ನೆರೆ ಮನೆಯವರು ಏನೋ ಯಡವಟ್ಟು ಆಗಿದೆ ಅಂತ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ, ನೆಲ ಮಹಡಿಯಲ್ಲಿ ಗ್ಯಾಸ್ ಲೀಕ್ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಸ್ಯಾಡಿಯ ಸಮಯ ಪ್ರಜ್ಞೆಯಿಂದಾಗಿ ಭಾರೀ ದುರಂತವೊಂದು ತಪ್ಪಿದೆ. ಈ ಬಗ್ಗೆ ಖುದ್ದು ನ್ಯೂಯಾರ್ಕ್ ಪೊಲೀಸರೇ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದು, ಶ್ವಾನವೂ ತನ್ನ ಮಾಲೀಕರ ಕುಟುಂಬದ ಜೀವವನ್ನ ರಕ್ಷಿಸಿದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಮಗೆ ಯಾವಾಗ ಶ್ವಾನದ ನೆರವು ಬೇಕಾದ್ರೂ ನಮ್ಮ ಲಿಸ್ಟ್​ನಲ್ಲಿ ನಿನ್ನ ಹೆಸರನ್ನೇ ಮೊದಲಿಗೆ ಹಾಕುತ್ತೇವೆ ಅಂತ ಸ್ಯಾಡಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv