ಈ ಮನೆಯಲ್ಲಿತ್ತು 22,000 ಜೇನುಗಳ ಬೃಹತ್​ ಜೇನುಗೂಡು..!

ನೀವು ಸಾಮಾನ್ಯವಾಗಿ ಜೇನುಗೂಡುಗಳನ್ನ ನೋಡಿರ್ತೀರ. ಅದ್ರಲ್ಲೂ ಹೆಜ್ಜೇನಿನ ಗೂಡು  ತುಂಬಾ ದೊಡ್ಡದಾಗಿರುತ್ತದೆ. ಆದ್ರೆ ಎಲ್ಲಾದ್ರೂ 20 ಸಾವಿರ ಜೇನುಗಳನ್ನ ಒಟ್ಟಿಗೆ ನೋಡಿದ್ರೆ ಏನಂತೀರ?

ಇಂಗ್ಲೆಂಡ್​​ನ ಕೋವಿಂಟ್ರಿ ನಗರದ ನಿವಾಸಿಯೊಬ್ಬರ ಮನೆಯಲ್ಲಿ ಬೃಹತ್​ ಜೇನುಗೂಡನ್ನ ತೆರವುಗೊಳಿಸಲಾಗಿದೆ. ಇವರ ಮನೆಯಲ್ಲಿದ್ದ ಜೇನುಗೂಡು ಎಷ್ಟು ದೊಡ್ಡದಿತ್ತು ಎಂದರೆ ಸುಮಾರು 22 ಸಾವಿರ ಜೇನುಗಳು ಅಲ್ಲಿದ್ದವು. ಮೂರು ಮಹಡಿಗಳ ಈ ಮನೆಯ ಅಟ್ಟದಲ್ಲಿದ್ದ ರೂಮಿನಲ್ಲಿ ಸುಮಾರು 10 ವರ್ಷಗಳಿಂದ ಈ ಜೇನುಗಳು ಗೂಡು ಕಟ್ಟಿದ್ದವು.

ಈ ಜೇನುಗಳಿಂದ ಬೇಸತ್ತಿದ್ದ ಕುಟುಂಬಸ್ಥರು ಅಟ್ಟವನ್ನ ಮುಚ್ಚಿದ್ದರು. ಈವರೆಗೆ ಸಾಕಷ್ಟು ಪೆಸ್ಟ್​​ ಕಂಟ್ರೋಲ್​ಗಳು ಈ ಗೂಡನ್ನ ಹೊರತೆಗೆಯಲು ಬಂದಿದ್ರೂ, ಇದು ತುಂಬಾ ಸೂಕ್ಷ್ಮವಾಗಿದೆ ಎಂದು ಹೇಳಿ ಗೂಡ ತೆರವುಗೊಳಿಸಲು ನಿರಾಕರಿಸಿದ್ದರು. ಕೊನೆಗೆ ಡೆಲ್ಟಾ ಪೆಸ್ಟ್​​ ಕಂಟ್ರೋಲ್​ ತಂಡ ಈ ಗೂಡನ್ನ ತೆರವುಗೊಳಿಸಿದೆ.

ಮೊದಲಿಗೆ ವ್ಯಾಕ್ಯೂಮ್​​ ಬಳಸಿ ಜೇನುಗಳನ್ನ ಹಿಡಿದು ಒಂದು ಬಾಕ್ಸ್​ಗೆ ಹಾಕಿದ್ದಾರೆ. ನಂತರ ಗೂಡಿನ ಮೇಣದ ಭಾಗವನ್ನ ಹೊರತೆಗೆದಿದ್ದಾರೆ. ಈಗ ಈ ಜೇನುಗಳನ್ನ, ಏಪಿಯಾರಿ ಎಂಬ ಸಾಕಷ್ಟು ಜೇನುಗೂಡುಗಳುಳ್ಳ ಪ್ರದೇಶಕ್ಕೆ ಕಳಿಸಿ ಜೇನು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಈ ಜೇನುಗಳು ನಮಗೆ ಹೆಚ್ಚಿನದ್ದೇನೂ ಅಪಾಯ ಮಾಡಿರಲಿಲ್ಲ ಅಂತ ಮನೆಯವರು ಹೇಳಿದ್ದಾರೆ.

  


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv