ಶಿಳ್ಳೆ, ಚಪ್ಪಾಳೆ ಹೊಡೆದು ಚುಡಾಯಿಸಿದ ಬೀದಿ ಕಾಮಣ್ಣನಿಗೆ ಬಿತ್ತು ಧರ್ಮದೇಟು..!

ಹುಬ್ಬಳ್ಳಿ: ರಸ್ತೆ ಬದಿ ಶಿಳ್ಳೆ, ಚಪ್ಪಾಳೆ ಹೊಡೆದು ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ನೇಕಾರ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.

ಸಾರ್ವಜನಿಕರಿಂದ ಧರ್ಮದೇಟು ತಿಂದ ವ್ಯಕ್ತಿಯನ್ನು ರಮೇಶ್​ ಶಿಗ್ಲಿ ಎನ್ನಲಾಗಿದೆ. ರಮೇಶ್​ ಶಿಗ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ನಿತ್ಯ ಈತನ ವರ್ತನೆಗೆ ಸಾರ್ವಜನಿಕರು ಬೇಸತ್ತಿದ್ದರು. ನಿನ್ನೆ ನೇಕಾರ ನಗರದ ಬ್ರಿಡ್ಜ್​ ಬಳಿ ಯುವತಿಯರಿಗೆ ಚುಡಾಯಿಸುವುದನ್ನು ಕಂಡ ಸ್ಥಳೀಯರು ರಮೇಶ್​ಗೆ ಥಳಿಸಿದ್ದಾರೆ. ಸಾರ್ವಜನಿಕರು ಧರ್ಮದೇಟು ನೀಡಿದ ಬಳಿಕ ಬೀದಿ ಕಾಮಣ್ಣನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv