ತಂದೆ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆಗೆ ಯತ್ನ

ಚಿತ್ರದುರ್ಗ: ಸಾಲಬಾಧೆ ತಾಳಲಾರದೆ ತಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಕ್ಕೆ ಮನನೊಂದು ಮಗ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಳ್ಳಕೆರೆ ತಾಲೂಕಿನ ಕುದಾಪುರ ಲಂಬಾಣಿಹಟ್ಟಿಯಲ್ಲಿ ಇಂದು ನಡೆದಿದೆ.
ವೆಂಕಟೇಶ್​(22) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸಾಲಬಾಧೆ ತಾಳಲಾರದೇ ವೆಂಕಟೇಶ್​ ತಂದೆ ನಿನ್ನೆ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂದೆ ಸಾವಿನಿಂದ ಮನನೊಂದು ವೆಂಕಟೇಶ್​ ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾರೆ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್​ರನ್ನು ಸ್ಥಳೀಯರು ಕೂಡಲೇ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ನಾಯಕನಹಟ್ಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv