ಕಳೆದುಹೋದ ಪರ್ಸ್​ ಮತ್ತು ಪೊಲೀಸಪ್ಪನ ಪ್ರಾಮಾಣಿಕತೆ…

ಕೊಡಗು: ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಾಲೆಟ್​ನ್ನ ಪೊಲೀಸ್ ಪೇದೆಯೊಬ್ಬರು ಅದರ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮಡಿಕೇರಿ ಸಂಚಾರಿ ಠಾಣೆ ಸಿಬ್ಬಂದಿ ಸಂತೋಷ್ ಖಾಸಗಿ ಬಸ್ ನಿಲ್ದಾಣದಲ್ಲಿ ಡ್ಯೂಟಿ ಮಾಡ್ತಿದ್ದರು. ಈ ವೇಳೆ ಅಲ್ಲಿ ಬಿದ್ದಿದ್ದ ಪೌಚ್​ವೊಂದು ಅವರ ಕಣ್ಣಿಗೆ ಬಿದ್ದಿದೆ. ಅದನ್ನು ತೆರೆದು ನೋಡಿದಾಗ, ಅದರಲ್ಲಿ ಮಡಿಕೇರಿ ತಾಲೂಕು ಕಾರುಗುಂದ ಗ್ರಾಮದ ಕೊಡಗನ ಕಾಳಪ್ಪ ಎಂಬುವವರ ಗುರುತಿನ ಚೀಟಿ ಸಿಕ್ಕಿದೆ. ತಕ್ಷಣ ಕಾರುಗುಂದದ ತನ್ನ ಸ್ನೇಹಿತರನ್ನು ಸಂಪರ್ಕಿಸಿ ಕಾಳಪ್ಪ ಅವರಿಗೆ ವಿಷಯ ತಿಳಿಸಿ ಪರ್ಸ್​ ಅವರಿಗೆ ವಾಪಸ್​​ ಸಿಗುವಂತೆ ಮಾಡಿದ್ದಾರೆ.
5 ಸಾವಿರ ರೂಪಾಯಿ ನಗದು ಇದ್ದ ವ್ಯಾಲೆಟ್‌ನಲ್ಲಿ ಎರಡು ಎಟಿಎಂ ಕಾರ್ಡ್‌ಗಳಿದ್ದವು. ಪಾಸ್​ವರ್ಡ್ ನಂಬರ್ ಅನ್ನು ಅದರ ಮೇಲೆಯೇ ಬರೆಯಲಾಗಿತ್ತು. ಮೇಲಾಗಿ ಸುಮಾರು ಒಂದೂವರೆ ಲಕ್ಷ ರೂ. ಅಕೌಂಟ್‌ನಲ್ಲಿತ್ತು. ಇದೀಗ ಪೇದೆಯ ಪ್ರಾಮಾಣಿಕತೆಯಿಂದ ಪರ್ಸ್​ ವಾಪಸ್​ ಪಡೆದುಕೊಂಡಿರುವ ಕಾಳಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಾತ್ರವಲ್ಲದೇ ಸಂತೋಷ್ ಅವರ ಕರ್ತವ್ಯ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.