ಅಮೆರಿಕಾದಿಂದ ಬಂದು ಧಾರವಾಡದಲ್ಲಿ ವೋಟ್​ ಮಾಡಿದ ಇಂಜಿನಿಯರ್

ಧಾರವಾಡ: ಇಂದು ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಬೆಳಗ್ಗೆಯಿಂದಲೆ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಧಾರವಾಡದಲ್ಲಿ ವ್ಯಕ್ತಿಯೊಬ್ಬರು ಅಮೆರಿಕಾದಿಂದ ಬಂದು ವೋಟ್​ ಮಾಡಿದ್ದಾರೆ. ಅಮೆರಿಕದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿಹಾಲ್ ಸಚಿಶ್ತಲ ಹಾಗೂ ಅವರ ತಾಯಿ ಮಂಗಳಾ ಅವರು ಧಾರವಾಡಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಧಾರವಾಡದ ಸಾರಸ್ವತಪುರ ಮಾಡರ್ನ್ ಶಾಲೆಯಲ್ಲಿ ತಾಯಿ ಮಗ ಮತ ಚಲಾಯಿಸಿದ್ದಾರೆ. ನಿಹಾಲ್ ಅಮೆರಿಕಾದಿಂದ ಬೆಂಗಳೂರಿಗೆ ಬಂದು, ಬೆಂಗಳೂರಿನಲ್ಲಿದ್ದ ತಾಯಿಯನ್ನೂ‌ ಮತದಾನಕ್ಕೆ ಕರೆದುಕೊಂಡ ಬಂದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv