ಎಂ.ಬಿ.ಪಾಟೀಲ್ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್, ವ್ಯಕ್ತಿ ಬಂಧನ

ಕಲಬುರ್ಗಿ: ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನ ಬಂಧಿಸಲಾಗಿದೆ. ವೀರಭದ್ರಪ್ಪ‌ ವರದಾನಿ ಬಂಧಿತ ವ್ಯಕ್ತಿ. ಆತ ನಗರದ ಕೈಲಾಶ ನಗರದ ನಿವಾಸಿ ಎನ್ನಲಾಗಿದೆ. ನಿನ್ನೆ ನಗರದ ರಾಘವೇಂದ್ರ ನಗರ ಠಾಣೆ ಪೊಲೀಸರು ವೀರಭದ್ರಪ್ಪ‌ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ವೀರಭದ್ರಪ್ಪ ಪತ್ರಿಕೆ ಒಂದರಲ್ಲಿ ಬಂದ ಸುದ್ದಿಗೆ ‘ಧರ್ಮನಿಂದಕ ಎಂ ಬಿ ಪಾಟೀಲ್’ ಅಂತ ಬರೆದು ಪೊಸ್ಟ್ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ವೀರಭದ್ರಪ್ಪ ಬಂಧನದ ನಂತರ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಗೃಹ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ವೀರಶೈವ ಸಮಾಜದ ಮುಖಂಡರು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv