ನಿಮ್ಮ ಋತುಚಕ್ರ ನಿಯಮಿತವಾಗಿಲ್ಲವೇ? ಇಲ್ಲಾಂದ್ರೆ ಖಂಡಿತ ಇದನ್ನ ಓದಿ..!

ಮಹಿಳೆಯರಲ್ಲಿ ಋತುಚಕ್ರ (ಮುಟ್ಟು)ಪ್ರಕ್ರಿಯೆ ಪ್ರತಿ ತಿಂಗಳು ನಡೆಯುತ್ತೆ. ನಿಯಮಿತ ಋತುಚಕ್ರ 28 ದಿನಗಳಿಗೊಮ್ಮೆ ಶುರುವಾದ್ರೆ ಅದನ್ನ ರೆಗ್ಯುಲರ್ ಪೀರಿಯಡ್ಸ್ (ನಿಯಮಿತ ಋತುಚಕ್ರ) ಎಂದು ಕರೆಯುತ್ತಾರೆ. ಆದರೆ 28 ದಿನಗಳ ಅವಧಿಯಿಂದ 35 ದಿನಗಳವರೆಗೂ ಋತುಚಕ್ರ ಶುರುವಾಗದಿದ್ದಲ್ಲಿ ಅದನ್ನ ಅನಿಯಮಿತ ಮುಟ್ಟು ಎನ್ನುತ್ತಾರೆ. ಸಾಮಾನ್ಯವಾಗಿ ಕೆಲ ಮಹಿಳೆಯರಲ್ಲಿ ಅನಿಯಮಿತ ಮುಟ್ಟು (ಇರ್ರೆಗ್ಯುಲರ್ ಪೀರಿಯಡ್ಸ್) ಕಂಡುಬರುತ್ತೆ. ಇದಕ್ಕೆ ಅನೇಕ ಸೈಂಟಿಫಿಕ್ (ವೈಜ್ಞಾನಿಕ)ಅಥವಾ ನಾನ್ ಸೈಂಟಿಫಿಕ್ ಕಾರಣಗಳಿವೆ. ಆದ್ರೆ ಕೆಲ ಮಹಿಳೆಯರು ಮಾತ್ರ ಒತ್ತಡದ ಕೆಲಸಗಳ ನಡುವೆಯೂ ಸಹ ನಿಯಮಿತ ಮುಟ್ಟಿನ ಪ್ರಕ್ರಿಯೆ ಹೊಂದಿರುತ್ತಾರೆ. ಇದೆಲ್ಲಾ ಅವರ ದೈಹಿಕ, ಮಾನಸಿಕ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತೆ. ಅನಿಯಮಿತ ಮುಟ್ಟನ್ನು ನಿಯಮಿತವನ್ನಾಗಿಸಲು ಅನೇಕ ಔಷದಿಗಳು ದೊರಕುತ್ತವೆ. ಆದರೆ ಅವುಗಳಿಂದ ಸಣ್ಣ ಪುಟ್ಟ ಅಡ್ಡಪರಿಣಾಮಗಳಂತೂ ಕಟ್ಟಿಟ್ಟ ಬುತ್ತಿ. ಈ ಟಿಪ್ಸ್‌ನ ಫಾಲೋ ಮಾಡಿದ್ರೆ ನೀವು ನಿಮ್ ರೆಗ್ಯುಲರ್ ಪೀರಿಯಡ್ಸ್‌ನ ಮರಳಿ ಪಡೀಬಹುದು.

– ನಿಮ್ಮ ದೈನಂದಿನ ಕೆಲಸವನ್ನ ಸರಿಯಾದ ರೀತಿಯಲ್ಲಿ ಆಯೋಜಿಸಿ
ಅನೇಕ ಜನರಿಗೆ ಸಮಯದ ಕೊರತೆಯಿಂದಾಗಿ ಸರಿಯಾಗಿ ಆರೋಗ್ಯ ನೋಡಿಕೊಳ್ಳಲು ಸಾದ್ಯವಾಗುವುದಿಲ್ಲ. ದಿನನಿತ್ಯದ ಚಟುವಟಿಕೆಗಳಲ್ಲಿ ಏರುಪೇರಾದಾಗ ದೇಹ ಭಾವನಾತ್ಮಕ ಸಮತೋಲನ ಕಳೆದುಕೊಳ್ಳುತ್ತೆ. ಇದ್ರಿಂದ ಹಾರ್ಮೋನ್‌ಗಳ ಅಸಮತೋಲನ ಉಂಟಾಗುತ್ತೆ. ಇದರಿಂದ ಆತಂಕ, ಉತ್ಸಾಹ, ಕೋಪ, ಖಿನ್ನತೆ ಮುಂತಾದ ಸಮಸ್ಯಗಳು ಆರಂಭವಾಗುತ್ವೆ. ಆದ್ದರಿಂದ ನಿಮ್ಮ ದಿನ ನಿತ್ಯದ ಕೆಲಸಗಳನ್ನ ಸರಿಯಾದ ರೀತಿಯಲ್ಲಿ ಆಯೋಜಿಸುವುದು ಅವಶ್ಯಕ.

– ಮೂಳೆ ಆರೋಗ್ಯ ಕಾಪಾಡಿಕೊಳ್ಳಬೇಕು
ಈಸ್ಟ್ರೊಜೆನ್, ಪ್ರೊಜೆಸ್ಟಿರಾನ್ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳು ಸಂತಾನೋತ್ಪತ್ತಿಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಈ ಹಾರ್ಮೋನ್‌ಗಳು ಎಲುಬುಗಳ ಬೆಳವಣಿಗೆಯಲ್ಲಿ ಮತ್ತು ಎಲುಬುಗಳನ್ನ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಎಲುಬುಗಳ ಆರೋಗ್ಯವನ್ನ ಕಾಪಾಡಿಕೊಳ್ಳುವುದರಿಂದ ಹಾರ್ಮೋನ್ ಉತ್ಪತ್ತಿ ಕೂಡ ಸರಿಯಾಗಿ ಆಗುತ್ತೆ.

– ಥೈರಾಯಿಡ್ ಬ್ಯಾಲೆನ್ಸ್ ನಿರ್ವಹಿಸಬೇಕು
ಥೈರಾಯ್ಡ್ ಹಾರ್ಮೋನ್ ಯಾರಲ್ಲಿ ಸರಿಯಾಗಿ ಉತ್ಪತ್ತಿಯಾಗುವುದಿಲ್ಲವೋ ಅಂತಹ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿಗೆ ಕಾರಣವಾಗುತ್ತೆ. ದೇಹದ ಕತ್ತಿನ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಗಳು ನಿಮ್ಮ ದೇಹದಲ್ಲಿನ ಚಯಾಪಚಯ ಕಾರ್ಯಗಳನ್ನ ನಿಯಂತ್ರಿಸೋದಕ್ಕೆ ಮತ್ತು ನಿಮ್ಮ ದೇಹದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನ ಸರಿಪಡಿಸಲು ಕಾರಣವಾಗಿದೆ. ಹಾಗಾಗಿ ಥೈರಾಯ್ಡ್ ಹಾರ್ಮೋನ್‌ನ ಸಮತೋಲನ ಕಾಪಾಡಿಕೊಳ್ಳಬೇಕು.

– ನಿಮ್ಮ ದೇಹದ ತೂಕ ಕಾಪಾಡಿಕೊಳ್ಳಬೇಕು
ಮುಟ್ಟು ಸರಿಯಾದ ಸಮಯಕ್ಕೆ ಆಗಬೇಕಾದರೆ ಅತ್ಯಂತ ಪ್ರಮುಖ ಅಂಶವೆಂದರೆ ಮಹಿಳೆಯರ ದೇಹದ ತೂಕ. ಸರಿಯಾದ ಎತ್ತರ, ತೂಕದಲ್ಲಿ ಏರುಪೇರಾದಾಗ ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣಕಾರಿಯಾಗಿ ಉತ್ಪತ್ತಿಯಾಗುವುದಿಲ್ಲ. ಅಧಿಕ ದೇಹದ ತೂಕದಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯದ ಮೇಲೆಯೂ ಸಹ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನ್ ಉತ್ಪತ್ತಿಯಲ್ಲಿಯೂ ಪರಿಣಾಮ ಉಂಟಾಗಿ ಅನಿಯಮಿತ ಮುಟ್ಟಾಗುವ ಸಾದ್ಯತೆ ಹೆಚ್ಚಿರುತ್ತದೆ. ಆದ್ದರಿಂದ ದೇಹದ ತೂಕವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.

– ಮೂತ್ರ ಜನಕಾಂಗದ ಕಾರ್ಯ ನಿರ್ವಹಣೆ ಕಾಪಾಡಿಕೊಳ್ಳಬೇಕು
ಮೂತ್ರಜನಕಾಂಗದ ಗ್ರಂಥಿಗಳು ವ್ಯಕ್ತಿಯ ಭಾವನಾತ್ಮಕ ಸ್ಥಿರತೆ ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತವೆ. ಪರಿಸ್ಥಿತಿ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಮಿದುಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ವೇಳೆ ಮೂತ್ರಜನಕಾಂಗ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ದೇಹ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗೋ ಸಾಧ್ಯತೆಗಳಿರುತ್ತವೆ. ಇದರಿಂದ ಹಾರ್ಮೋನ್‌ಗಳ ಅಸಮತೋಲನವಾಗುತ್ತೆ. ಆದ್ದರಿಂದ ಅಡ್ರಿನಾಲಿನ್ ಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ನಿರೋಧಕತೆಯ ಮೇಲೆ ಸರಿಯಾದ ನಿಯಂತ್ರಣ ಹೊಂದುವುದು ಸರಿಯಾದ ಸಮಯದಲ್ಲಿ ಮುಟ್ಟಾಗುವಂತೆ ಮಾಡುತ್ತೆ.

– ಫಿಟ್ನೆಸ್‌ನ ಅಗತ್ಯವಾಗಿ ಕಾಪಾಡಿಕೊಳ್ಳಬೇಕು
ಮಹಿಳೆಯರ ಮತ್ತು ಪುರುಷರ ಫಿಟ್ನೆಸ್ ಸಂಪೂರ್ಣವಾಗಿ ಭಿನ್ನವಾಗಿದೆ. ಮಹಿಳೆಯರು ಅಗತ್ಯವಾಗಿ ಸಣ್ಣ ವ್ಯಾಯಾಮಗಳನ್ನ ಮಾಡುವ ಮೂಲಕ ಅಥವಾ ಯೋಗಾಭ್ಯಾಸ ಮಾಡುವುದರ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳಬೇಕು.

ಪವಿತ್ರ, ಪಸ್ಟ್‌ನ್ಯೂಸ್, ಬೆಂಗಳೂರು