ರಾಜ್ಯ ಸರ್ಕಾರದ ಮೇಲೆ ರೈತರಿಗಿದ್ದ ಭರವಸೆ ಹುಸಿಯಾಗಿದೆ: ಬಸವರಾಜ್ ಇಂಗಳಗಿ

ಬಳ್ಳಾರಿ: ಜೆಡಿಎಸ್ ಮೇಲೆ ಜನರ ವಿಶ್ವಾಸ ಉಳಿಯಬೇಕಾದರೆ ಮುಖ್ಯಮಂತ್ರಿಗಳು ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಅಂತಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬಸವರಾಜ್ ಇಂಗಳಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ರೈತರಿಗಿದ್ದ ಭರವಸೆ ಹುಸಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್​​​​​ನಲ್ಲಿ ರೈತರಿಗೆ ಪೂರಕವಾದ ಅಂಶಗಳು ಇರದೇ ಇದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುತ್ತೇವೆ. ಸರ್ಕಾರ ರೈತಪರ ಯೋಜನೆಗಳನ್ನು ಜಾರಿ ಮಾಡಬೇಕು ಅಂತಾ ಆಗ್ರಹಿಸಿದರು. ಕೇಂದ್ರ ಸರ್ಕಾರದಿಂದ ಅನೇಕ ರೈತಪರ ಯೋಜನೆಗಳು ಬಂದಿವೆ. ಕೃಷಿ ಪರಿಕರಗಳ ಬೆಲೆ ಕಡಿಮೆ ಆಗಿದೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv