ಊಟಕ್ಕೆ ಗತಿಯಿಲ್ಲ, ಕೆಲಸ ಇಲ್ಲ ಅಂತ ಅಂತಿಮವಾಗಿ ಯುವಕರು ಆ ಸೈನ್ಯ ಸೇರ್ತಾರೆ-ಕುಮಾರಸ್ವಾಮಿ

ಬೆಂಗಳೂರು: ದೇಶದ ಯುವಕರು ಊಟಕ್ಕೆ ಗತಿಯಿಲ್ಲದೇ, ಕೆಲಸವಿಲ್ಲದೇ ಅಂತಿಮವಾಗಿ ಹೋಗಿ ಸೈನ್ಯಕ್ಕೆ ಸೇರುತ್ತಿದ್ದಾರೆ. ಇಂಥವ್ರ ಜೊತೆ ಪ್ರಧಾನಿ ನರೇಂದ್ರ ಮೋದಿ ಚೆಲ್ಲಾಟ ಆಡುತ್ತಿದ್ದಾರೆ ಅಂತಾ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಬೈರೇಗೌಡರ ಪರ ಪ್ರಚಾರ ನಡೆಸಿ ಇತ್ತೀಚೆಗೆ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ದೇಶದ ಯೋಧರ ಬಗ್ಗೆ ಪ್ರಸ್ತಾಪ ಮಾಡಿದರು. ‘ದೇಶ ಗಡಿಯನ್ನ ಕಾಯುತ್ತಿರುವವರು ಯಾವುದೇ ಶ್ರೀಮಂತರ ಮಕ್ಕಳಲ್ಲ. ಎರಡು ಹೊತ್ತಿನ ಊಟಕ್ಕೆ ಗತಿಯಲ್ಲ, ಕೆಲಸ ಇಲ್ಲ ಅಂತಾ ಹೇಳಿ ಅಂತಿಮವಾಗಿ ಕೆಲವು ಯುವಕರು ಆ ಸೈನ್ಯಕ್ಕೆ ಸೇರಿದ್ದಾರೆ. ಅವರ ಬಾಳಿನ ಜೊತೆ ಚೆಲ್ಲಾಟ ಆಡುತ್ತಿರೋರು ಪ್ರಧಾನಿ ನರೇಂದ್ರ ಮೋದಿ ಅಂತಾ ಕುಟುಕಿದ್ದಾರೆ.

ಕುಮಾರಸ್ವಾಮಿ ಅವ್ರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಯೋಧರ ಬಗ್ಗೆ ಆಡಿರುವ ಮಾತುಗಳನ್ನ ಬಲವಾಗಿ ಖಂಡಿಸಿರುವ ಬಿಜೆಪಿ, ಟ್ವಿಟರ್​ನಲ್ಲಿ ಸಿಎಂ ಆಡಿರುವ ವಿಡಿಯೋ ತುಣಕನ್ನ ಅಪ್​ಲೋಡ್​ ಮಾಡಿದೆ. ಸಿಎಂ ಕುಮಾರ್​​ ಸ್ವಾಮಿ ಅವರೇ ಜನರು ಸೈನ್ಯಕ್ಕೆ ಸೇರೋದು ದೇಶದ ಮೇಲಿನ ಪ್ರೀತಿಗೆ. ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲಾಗಿ ನಿವ್ಯಾಕೆ ಸೇನೆಗೆ ಅವರನ್ನ ಕಳುಹಿಸಬಾರದು? ಅಂತಾ ಬಿಜೆಪಿ ಟ್ವಿಟರ್​ನಲ್ಲಿ ಕೇಳಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv