ಬಳ್ಳಾರಿಯಲ್ಲಿ ಮತ ಹಾಕಿದವ್ರಿಗೆ ಮಜ್ಜಿಗೆ ಫ್ರೀ

ಬಳ್ಳಾರಿ: ಚುನಾವಣೆಗಳಲ್ಲಿ ಮತ ಚಲಾಯಿಸೋದು ಪ್ರಜೆಗಳ ಹಕ್ಕು. ಆದ್ರೆ ಕೆಲವರು ಮತ ಹಾಕುವ ಗೋಜಿಗೇ ಹೋಗದೇ ಪ್ರವಾಸಕ್ಕೆ ತರಳುವವರಿದ್ದಾರೆ. ಇನ್ನೂ ಕೆಲವರು ಆಲಸ್ಯದಿಂದ ಮನೆಯಲ್ಲೇ ಇದ್ದುಬಿಡ್ತಾರೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ  ವೋಟ್​ ಹಾಕುವಂತೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳಿಗೆ ಉಚಿತ ಮಾರ್ಕ್ಸ್​, ಬಾರ್​ನಲ್ಲಿ ಎಣ್ಣೆ ಮೇಲೆ ಡಿಸ್ಕೌಂಟ್​​ನಂತಹ ಆಫರ್​ಗಳನ್ನೂ ನೀಡಲಾಗಿದೆ. ಅದೇ ರೀತಿ ಬಳ್ಳಾರಿಯಲ್ಲಿ ಮತ ಹಾಕಿದವ್ರಿಗೆ ಉಚಿತ ಮಜ್ಜಿಗೆ ನೀಡುವ ಮೂಲಕ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಇಂದು ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಬಳ್ಳಾರಿಯಲ್ಲಿ ಮತ ಹಾಕಿದವರಿಗೆ ಉಚಿತವಾಗಿ ಮಜ್ಜಿಗೆ ನೀಡಲಾಗ್ತಿದೆ. ಮತ ಹಾಕಿ, ಶಾಯಿ ತೋರಿಸಿ ತಂಪು ಮಜ್ಜಿಗೆ ಕುಡಿಯಿರಿ ಎಂದು ಬಳ್ಳಾರಿಯ ಜನತಾ ಹೊಟೇಲ್ ಆಫರ್ ನೀಡಿದೆ. ಮತ ಹಾಕಿದ ಜನರು ಫ್ರೀಯಾಗಿ ಮಜ್ಜಿಗೆ ಸವಿಯುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv