ಇಲ್ಲಿ ಸರ್ಕಾರಿ ಕಚೇರಿ ಗೋಡೆಗಳೇ ಮೂತ್ರವಿಸರ್ಜನೆ ಸ್ಪಾಟ್​ಗಳು..!

ಕೊಪ್ಪಳ: ಸ್ವಚ್ಛ ಭಾರತ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಯೊಂದು ನಗರ ಪ್ರದೇಶಗಳು ಸ್ವಚ್ಛತೆ ಕಡೆಗೆ ಸಾಗುತ್ತಿವೆ. ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿನಿ ಮಲ್ಲಮ್ಮ ಬಯಲುಶೌಚದ ವಿರುದ್ಧ ಹೋರಾಟ ನಡೆಸಿ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಮ್ಮನ ಕುರಿತು ಮನ್​ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಆದರೆ ಈಗ ಕೊಪ್ಪಳವನ್ನು ಬಯಲು ಶೌಚಾಲಯಮುಕ್ತ ಜಿಲ್ಲೆಯನ್ನಾಗಿಸಲು ಹೊರಟ ಜನಪ್ರತಿನಿಧಿಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಕೊಪ್ಪಳ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳಿಲ್ಲ. ಆಡಳಿತ ಕಚೇರಿಗಳು ಕೂಡ ಹಂದಿಗೂಡು, ಬಯಲು ಶೌಚಾಲಯಗಳಾಗಿವೆ. ಸುತ್ತಲಿನ ಗ್ರಾಮಗಳಿಂದ ಕಚೇರಿಗಳಿಗೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಅವರು ಕಚೇರಿಗಳಲ್ಲಿ ಶೌಚಾಲಯಗಳಿಲ್ಲದ ಕಾರಣ ಮೂತ್ರ ವಿಸರ್ಜನೆಗೆ ಕಚೇರಿಯ ಕಂಪೌಡ್​​ ಗೋಡೆಗಳನ್ನೇ ಆಶ್ರಯಿಸಿಕೊಂಡಿದ್ದಾರೆ. ಹೀಗಾಗಿ ಕಚೇರಿಗೆ ಮೂಗು ಮಚ್ಚಿಕೊಂಡು ತೆರಳಬೇಕಾದ ಸ್ಥಿತಿ ನಿರ್ಮಾನವಾಗಿದೆ. ಕಂದಾಯ ಇಲಾಖೆ, ನೋಂದಣಿ ಇಲಾಖೆ, ಕೃಷಿ ಇಲಾಖೆ ಹಾಗೂ ತಾಲೂಕು ಪಂಚಾಯತ್​​​ ಕಚೇರಿಗಳ ಆವರಣಗಳಲ್ಲಿ ಶೌಚಾಲಯಗಳಿದ್ದರೂ, ಅವುಗಳಿಗೆ ಬೀಗ ಹಾಕಲಾಗಿದೆ. ಇದರಿಂದಾಗಿ ಕೊಪ್ಪಳವನ್ನು ಬಯಲು ಶೌಚಾಲಯಮುಕ್ತ ಜಿಲ್ಲೆಯನ್ನಾಗಿಸಲು ಇದು ಸಮಸ್ಯೆಯಾಗಿ ಪರಿಣಮಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv