ಟಿಪ್ಪು ಜಯಂತಿ ವಿರೋಧಿಸಿದ ಪ್ರತಿಭಟನಾಕಾರರ ಬಂಧನ

ದಾವಣಗೆರೆ:  ಇಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ  ಟಿಪ್ಪು  ಜಯಂತಿ ವಿರೋಧಿ ಸಮಿತಿ ನಗರದ ಜಯದೇವ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ  ಟಿಪ್ಪು ಕನ್ನಡಿ ವಿರೋಧಿ, ಮತಾಂಧ ಟಿಪ್ಪು ಎಂದು ಘೋಷಣೆಗಳನ್ನ  ಕೂಗುತ್ತಾ ಪ್ರತಿಭಟನಾಕರರು ಸರ್ಕಾರದ ವಿರುದ್ದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಜಯದೇವ ಸರ್ಕಲ್​ನಲ್ಲಿ ಪೊಲೀಸ್​ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇನ್ನು ಶ್ರೀರಾಮ ಸೇನೆ, ಬಜರಂಗದಳ, ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಪ್ರತಿಭಟನಾಕಾರರು  ಟಿಪ್ಪು ಜಯಂತಿ ಕಾರ್ಯಕ್ರಮದ  ನಡೆಯುತ್ತಿದ್ದ ಕಡೆ ನುಗ್ಗಲು ಯತ್ನಿಸಿದ ವೇಳೆ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv

people protesting against tipu jayanti arrested in davanagere