ಸಕ್ಸಸ್​ಫುಲ್​ ಹಾಗೂ ಹೆಲ್ದಿ ಲೈಫ್​ಗಾಗಿ ಶತಾಯುಷಿಗಳು ನೀಡಿದ 12 ಸೂತ್ರಗಳು..!

ಸಾಮಾನ್ಯವಾಗಿ ಅಜ್ಜ-ಅಜ್ಜಿ ಜೊತೆ ಟೈಂ ಸ್ಪೆಂಡ್​ ಮಾಡೋದು ಅಂದರೆ ಎಲ್ಲಾರಿಗೂ ಇಷ್ಟವಾಗುತ್ತೆ ಅಜ್ಜಿ ಹೇಳೋ ಕಥೆಗಳಂತೂ ಇನ್ನೂ ಸೂಪರ್​.. ಇನ್ನು ಹಿರಿಯರೊಂದಿಗೆ ಚರ್ಚೆ ಮಾಡುವುದರಿಂದ ಅನೇಕ ಲಾಭಗಳಿವೆ. ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಸುಂದರ ಕಥೆಗಳಿರುತ್ತೆ, ಅನನ್ಯ ಜ್ಞಾನ ಮತ್ತು ಅವರ ಯಶಸ್ವಿ ಜೀವನದ ಗುಟ್ಟುಗಳಿರುತ್ತದೆ. ಇಂತಹ ಎಷ್ಟೋ ವಿಷಯಗಳು ನಮಗೆ ಮಾದರಿಯಾಗುವಂತಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ನಿಮ್ಮ ಸಂಬಂಧಗಳು ಮುರಿದು ಬೀಳುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಎಷ್ಟೇ ಕಷ್ಟಗಳು ಬಂದರೂ ಗಂಡ ಹೆಂಡತಿ ಒಟ್ಟಾಗಿ ಬಾಳುತ್ತಿದ್ದರು. ಹಿರಿಯರು ಬಾಳಿದ ಚಿಕ್ಕಪುಟ್ಟ ವಿಷಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಕ್ಸಸ್​ಫುಲ್​ ಲೈಫ್​ ನಿಮ್ಮದಾಗಿಸಿಕೊಳ್ಳಬಹುದು. ನೀವು ಕೂಡಾ ಸಕ್ಸಸ್​ಫುಲ್​ ಲೈಫ್​ ಲೀಡ್​ ಮಾಡಬೇಕಾ..? ಇಲ್ಲಿದೆ ಶತಾಯುಷಿಗಳು ನೀಡಿದ ಸಕ್ಸಸ್​ಫುಲ್​ ಹಾಗೂ ಹೆಲ್ದಿ ಲೈಫ್​ನ 12 ಸೂತ್ರಗಳು

1. ಸದಾ ಆಶಾವಾದಿಗಳಾಗಿರಿ ಮತ್ತು ಧನಾತ್ಮಕವಾಗಿ ಚಿಂತಿಸಿ. ಇದು ನಿಮ್ಮನ್ನ ಕಷ್ಟದಲ್ಲೂ ಎದೆಗುಂದದೆ ಮುನ್ನುಗ್ಗುವಂತೆ ಮಾಡುತ್ತದೆ.
2. ನಿಮ್ಮ ಮದುವೆ ಮತ್ತು ಸಂಬಂಧಗಳಲ್ಲಿ ನಿಮ್ಮನ್ನು ಮತ್ತು ಇತರರನ್ನು ಪ್ರೀತಿಸಿ. ಮತ್ತು ಪೋಷಿಸಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಪ್ರೀತಿಯನ್ನ ನೀವು ಪ್ರೀತಿಸುವವರಿಗೆ ನೇರವಾಗಿ ಹೇಳಿಕೊಳ್ಳಿ.
3. ನಿಮ್ಮ ಮದುವೆ ಸಮಯದಲ್ಲಿ ನಿಮ್ಮ ಸಂಗಾತಿಗೆ ಆದಷ್ಟು ಸಹಾಯ ಮಾಡಿ ಮತ್ತು ಪ್ರಮಾಣಿಕರಾಗಿರಿ. ಅವರೊಬ್ಬರ ಮೇಲೆಯೇ ಎಲ್ಲಾ ಜವಾಬ್ದಾರಿಯನ್ನ ಹೊರಿಸಬೇಡಿ.
4. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಚೆನ್ನಾಗಿ ಆಹಾರವನ್ನ ಸೇವಿಸಿ. ವ್ಯಾಯಾಮದಲ್ಲಿ ಸದಾ ಸಕ್ರೀಯವಾಗಿರಿ.
5. ನಿಮ್ಮ ಕೆಲಸದ ಕಡೆ ಹೆಚ್ಚು ಗಮನ ಕೊಡಿ. ಅದು ನಿಮ್ಮ ಗುರಿಯನ್ನ ಸಾಧಿಸಲು ಸಹಾಯ ಮಾಡುತ್ತದೆ.
6. ಎಲ್ಲರನ್ನೂ ಗೌರವಿಸಿ.
7. ಪ್ರತಿ ದಿನ ನಿಮಗೆ ಸಂತೋಷ ನೀಡುವಂತಹ ಒಳ್ಳೆಯ ಕೆಲಸಗಳನ್ನು ಮಾಡಿ.
8. ಸರಿಯಾದ ದಾರಿಯಲ್ಲಿ ನಡೆಯಿರಿ, ನಿಮಗೆ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿ.
9. ವಿನಯದಿಂದಿರಿ ಮತ್ತು ಸ್ವತಂತ್ರರಾಗಿರಿ, ಆದರೆ ನಿಮಗೆ ಅಗತ್ಯವಿರುವಾಗ ಸಹಾಯ ಕೇಳಲು ಹಿಂಜರಿಯದಿರಿ.
10. ಇತರರನ್ನು ಕ್ಷಮಿಸಿ. ಎಲ್ಲಾರೂ ತಪ್ಪುಗಳನ್ನು ಮಾಡುತ್ತೇವೆ, ಅತಿಯಾದ ಕೋಪ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾರ ಮೇಲೆ ಎಷ್ಟೇ ಕೋಪ ಇದ್ದರೂ ರಾತ್ರಿ ಮಲಗುವ ವೇಳೆಗೆ ಎಲ್ಲವನ್ನ ಮರೆತುಬಿಡಿ. ಇದು ನಿಮಗೂ ನೆಮ್ಮದಿಯನ್ನ ನೀಡುತ್ತದೆ.
12. ಎಲ್ಲರನ್ನ ಪ್ರೀತಿಸಿ. ನಿಮ್ಮ ಪ್ರೀತಿ ಪಾತ್ರರ ಜೊತೆ ಹೆಚ್ಚು ಸಮಯವನ್ನ ಕಳೆಯಿರಿ. ಇದು ನಿಮ್ಮನ್ನ ಸಂತೋಷವಾಗಿಡುತ್ತದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv