ಸರ್ಕಾರದ ವೈಫಲ್ಯಗಳನ್ನು ಜನ ಗಮನಿಸ್ತಿದ್ದಾರೆ: ಬಿಎಸ್​ವೈ

ತುಮಕೂರು: ಸಮ್ಮಿಶ್ರ ಸರ್ಕಾರದ ಬೆಳವಣಿಗೆಗಳನ್ನು ಜನ ನೋಡುತ್ತಿದ್ದಾರೆ. ವೈಫಲ್ಯಗಳನ್ನೂ ಸಹ ಗಮನಿಸುತ್ತಿದ್ದಾರೆ ಅಂತಾ ವಿರೋಧ ಪಕ್ಷದ ನಾಯಕ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾನು ಸುಮ್ಮನಿದ್ದೇನೆ. ವಿಧಾನ ಪರಿಷತ್​​​​ ಚುನಾವಣೆ ಬಳಿಕ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ ಎಂದರು. ಜೂನ್ 8ರಿಂದ ಅತಿವೃಷ್ಟಿ ಸಂಭವಿಸಿದ ಜಿಲ್ಲೆಗಳಿಗೆ ಪ್ರವಾಸ ಮಾಡ್ತೇನೆ ಎಂದು ತಿಳಿಸಿದರು. ಈ ವೇಳೆ ಅವರು ಕೇಂದ್ರ ಸರ್ಕಾರದಿಂದ ಸಾಂಸ್ಥಿಕ ಸಂಸ್ಥೆಗಳ ದುರುಪಯೋಗ ವಿಚಾರ‌ದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv