ಒಂದೇ ಒಂದು ಫೋಟೋ ತೆಗೆದ್ರೂ ಗಲ್ಲು ಶಿಕ್ಷೆ ಕೊಡ್ತಾರೆ..!

ಬ್ಯಾಂಕಾಕ್: ಡೇಂಜರಸ್​ ಪ್ಲೇಸ್​ಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಜೀವತೆತ್ತವರ ಬಗ್ಗೆ ಎಲ್ರೂ ಕೇಳಿರುತ್ತಾರೆ. ಆದ್ರೆ ಫೋಟೋಗೆ ಫೋಸ್ ಕೊಟ್ರೆ ಸಾಯೋ ಶಿಕ್ಷೆ ಕೊಡ್ತಾರೆ ಅನ್ನೋದನ್ನ ಕೇಳಿರುವುದು ಬಹಳ ವಿರಳ. ಥೈಲಾಂಡ್​ನ ಮೈ ಖಾವೋ ಬೀಚ್​ನಲ್ಲಿ ವಿಮಾನ ಲ್ಯಾಂಡ್​ ಆಗುವಾಗ ಫೋಟೋ ತೆಗೆದ್ರೆ ಅಲ್ಲಿನ ಸರ್ಕಾರ ಭಾರೀ ಶಿಕ್ಷೆ ವಿಧಿಸಲು ತೀರ್ಮಾನಿಸಿದೆ. ಒಂದೇ ಒಂದು ಫೋಟೋ ತೆಗೆದ್ರೂ ಜೈಲಲ್ಲಿ ಕೊಳೆಯಬೇಕಾಗುತ್ತೆ. ಥೈಲ್ಯಾಂಡ್​ ವಿಮಾನಯಾನ ಕಾನೂನಿನ ಅಡಿಯಲ್ಲಿ 87 ಸಾವಿರ ರೂಪಾಯಿ ದಂಡ ಜೊತೆಗೆ 20 ವರ್ಷ ಜೈಲು ಅಥವಾ ಮರಣ ದಂಡನೆ ಶಿಕ್ಷೆ ವಿಧಿಸಲು ತೀರ್ಮಾನಿಸಿದೆ. ಅದಕ್ಕೆ ಕಾರಣ ಕೂಡ ಇದೆ.
ಈ ಬೀಚ್ ಫುಕೆಟ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕವೇ ಇದೆ. ಹೀಗಾಗಿ ವಿಮಾನಗಳು ಬೀಚ್​ನಲ್ಲಿ ಲ್ಯಾಂಡ್ ಆಗುವ ವೇಳೆ ಬೀಚ್​ನಲ್ಲಿರುವ ಜನ ವಿಮಾನದ ಹತ್ತಿರ ಬಂದು ಪೋಟೋಗೆ ಫೋಸ್​ ಕೊಡಲು ಮುಂದಾಗುತ್ತಾರೆ. ಹೀಗೆ ಪೋಸ್​ ಕೊಡೋದ್ರಿಂದ ಪೈಲಟ್​ಗಳ ಗಮನ ಬೇರೆಡೆ ಹರಿಯುವ ಸಾಧ್ಯತೆಗಳಿರುತ್ತವೆ. ಇದ್ರಿಂದ ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗಬಹುದು ಅಂತಾ ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv