ಇಂದಿರಾ ಕ್ಯಾಂಟೀನ್‌ಗೆ ಬಿತ್ತು ಬೀಗ.. ಕ್ಯಾಂಟೀನ್ ಮೇಂಟೆನೆನ್ಸ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆೆಂಗಳೂರು: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರು ಸೇರಿ ಬೀಗ ಜಡಿದ ಘಟನೆ ಬಿಳೇಕಳ್ಳಿ ವಾರ್ಡಿನಲ್ಲಿ ನಡೆದಿದೆ. ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಸ್ವಚ್ಛತೆ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ಸಾರ್ವಜನಿಕರು ಬೀಗ ಸೇರಿ ಬಿಳೇಕಳ್ಳಿ ವಾರ್ಡ್ ನಂಬರ್ 188ರ ಇಂದಿರಾ ಕ್ಯಾಂಟೀನ್ಗೆ ಬೀಗ ಹಾಕಿದ್ದಾರೆ.

ಕ್ಯಾಂಟೀನ್ ವೇಸ್ಟೇಜ್ ತಂದು ಮೋರಿಗೆ ಸುರಿಯಲಾಗುತ್ತಿತ್ತು. ಇದ್ರಿಂದ ದುರ್ವಾಸನೆ ಬರುತ್ತಿತ್ತು ಅಂತಾ ಸಾರ್ವಜನಿಕರು ಆರೋಪಿಸಿ ಕ್ಯಾಂಟೀನ್‌ಗೆ ಬೀಗ ಜಡಿದಿದ್ದಾರೆ. ಇನ್ನು ಇಲ್ಲಿನ ಸಿಬ್ಬಂದಿ ಸ್ವಚ್ಚತೆ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಕ್ಯಾಂಟೀನ್ ಮೇಂಟೆನೆನ್ಸ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ವ್ಯವಸ್ಥೆ ಸರಿಪಡಿಸಿಕೊಳ್ಳೋವರೆಗೂ ಬೀಗ ತೆಗೆಯದಿರಲು ಸಾರ್ವಜನಿಕರು ತೀರ್ಮಾನ ಕೈಗೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv