“ದೇವರ ಮುಂದೆನೇ ದೇವಮಾನವರಾದ ಡಿಸಿಎಂ ಪರಮೇಶ್ವರ್​​”..

ತುಮಕೂರು: ತಾಲೂಕಿನ ಸೀಬಿ ಗ್ರಾಮದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹರಕೆ ತೀರಿಸಲು ಹೋಗಿದ್ದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​​, ದೇವಸ್ಥಾನದಲ್ಲಿ ದೇವಮಾನವರಾದ ಪ್ರಸಂಗ ಇಂದು ನಡೆದಿದೆ.
ದೇವಸ್ಥಾನಕ್ಕೆ ಬಂದಿದ್ದ ಸಾರ್ವಜನಿಕರು ಮತ್ತು ಮಹಿಳೆಯರು ಪರಮೇಶ್ವರ್​​ರನ್ನು ನೋಡಿದ ತಕ್ಷಣ ದೇವರಿಗೆ ನಮಸ್ಕರಿಸುವುದು ಬಿಟ್ಟು ಪರಮೇಶ್ವರ್​ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಮಹಿಳಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒಬ್ಬರು ನಂತರ ಮತ್ತೊಬ್ಬರಂತೆ ನಮಸ್ಕರಿಸಿದರೂ ಪರಮೇಶ್ವರ್​ ಅವರನ್ನು ತಡೆಯಲು ಮುಂದಾಗಲಿಲ್ಲ. ಸಮಾಜವಾದಿ, ಪ್ರಗತಿಪರರು ಎಂದುಕೊಳ್ಳುವವರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv