ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವೆ-ಪೇಜಾವರ ಶ್ರೀ

ಬಾಗಲಕೋಟೆ: ರಾಮಮಂದಿರ ನಿರ್ಮಾಣ ಸಂಬಂಧ ಮಾಜಿ ಶಾಸಕ ಎಸ್‌.ಕೆ.ಬೆಳ್ಳುಬ್ಬಿ ನೀಡಿದ್ದ ಹೇಳಿಕೆಗೆ ಪೇಜಾವರ ಶ್ರೀಗಳು ಟಾಂಗ್‌ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಹಳ ವರ್ಷಗಳ ಹಿಂದೆಯೇ ನಾವೇ ನಿಂತು ರಾಮ ಮಂದಿರ ನಿರ್ಮಾಣಕ್ಕೆ ದಲಿತ ವ್ಯಕ್ತಿಯಿಂದ ಅಡಿಗಲ್ಲು ಹಾಕಿಸಲಾಗಿದ್ದು, ಶಿಲಾನ್ಯಾಸ ಕೂಡ ನೆರವೇರಿಸಲಾಗಿದೆ ಅಂತ ಹೇಳಿದ್ದಾರೆ. ಕೇವಲ ರಾಮ ಮಂದಿರ ನಿರ್ಮಾಣ ಆಗೋದು ಮಾತ್ರ ಬಾಕಿ ಇದೆ, ಆದರೆ ಇದರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್​ ತಡೆ ನೀಡಿದ್ದು, ಕಾನೂನು ಮೀರಿ ಮುಂದೋಗಲು ಸಾಧ್ಯವಿಲ್ಲ. ರಾಮಮಂದಿರಕ್ಕೆ ನೀಡಿರೋ ಜಾಗ ಕೂಡ ಕಡಿಮೆಯಿದೆ. ಇದು ಕೂಡಾ ಇತ್ಯರ್ಥವಾಗಬೇಕೆಂದು ಹೇಳಿದ್ದಾರೆ. ಧೈರ್ಯ ಇದ್ರೆ ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗ್ಲಿ ನೋಡೋಣ ಅಂತ ಎಸ್‌.ಕೆ.ಬೆಳ್ಳುಬ್ಬಿ ಪ್ರಧಾನಿಗೆ ಸವಾಲ್‌ ಹಾಕಿದ್ರು.