‘ಮೈತ್ರಿ ಸರ್ಕಾರಕ್ಕಿಂತ ಸರ್ವ ಪಕ್ಷ ಸರ್ಕಾರ ಅಧಿಕಾರಕ್ಕೆ ಬರಲಿ’

ತುಮಕೂರು: ಸಮ್ಮಿಶ್ರ ಸರ್ಕಾರದ ಬಗ್ಗೆ ಇದೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಉಡುಪಿ ಅಷ್ಟಮಠದ ಯತಿಗಳಲ್ಲಿ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು, ಮೈತ್ರಿ ಸರ್ಕಾರಕ್ಕಿಂತ ಸರ್ವ ಪಕ್ಷ ಸರ್ಕಾರ ಅಸ್ತಿತ್ವಕ್ಕೆ ಬರುವುದೇ ಉತ್ತಮ ಎಂದಿದ್ದಾರೆ.
ಕಾಂಗ್ರೆಸ್​​, ಜೆಡಿಎಸ್​ ಪಕ್ಷಗಳು ಅಧಿಕಾರಕ್ಕೆ ಬರುವ ಮೊದಲು, ಪ್ರಚಾರ ಸಂದರ್ಭದಲ್ಲಿ ಪರಸ್ಪರ ಬೈದಾಡಿಕೊಂಡಿದ್ದವು, ಈಗ ಎರಡು ಪಕ್ಷಗಳು ಜೊತೆಯಾಗಿವೆ, ಅಷ್ಟು ಬೈದಾಡಿಕೊಂಡಿದ್ದವರಿಂದ ಸ್ಥಿರ ಸರ್ಕಾರ ಕೊಡಲು ಸಾಧ್ಯವಿಲ್ಲ, ವಿರೋಧ ಪಕ್ಷ ಇಲ್ಲದೇ ಇದ್ದರೂ ಪರವಾಗಿಲ್ಲ, ಸರ್ವ ಪಕ್ಷ ಅಧಿಕಾರಕ್ಕೆ ಬರಲಿ. ಸರ್ವ ಪಕ್ಷ ಅಧಿಕಾರಕ್ಕೆ ಬಂದ್ರೆ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನಿಲ್ಲುತ್ತದೆ ಅಂತಾ ಅಭಿಪ್ರಾಯ ಪಟ್ಟರು. ಅಲ್ಲದೇ ಯರೋಪ್​ ಹಾಗೂ ಇಂಗ್ಲೆಂಡ್​ನಲ್ಲಿ ಸರ್ವಪಕ್ಷ ಸರ್ಕಾರ ರಚನೆಯಾದ ಉದಾಹರಣೆ ಇದೆ ಅಂತಾ ತಿಳಿಸಿದ್ರು.

ಮೋದಿ ಸರ್ಕಾರವನ್ನ ಟೀಕಿಸಲಿಲ್ಲ, ಸಲಹೆ ಕೊಟ್ಟಿದ್ದೆ
ಈ ಹಿಂದೆ ಮೋದಿ ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿರುವುದರ ಕುರಿತು ಸ್ಪಷ್ಟನೆ ನೀಡಿರುವ ಪೇಜಾವರ ಶ್ರೀಗಳು, ನಾನು ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿರಲಿಲ್ಲ. ಸಲಹೆ ನೀಡಿದ್ದೆ ಅಂತಾ ತಿಳಿಸಿದ್ದಾರೆ. ಗಂಗಾ ಶುದ್ದೀಕರಣ ಕೆಲಸ ಇನ್ನಷ್ಟು ಚುರುಕುಗೊಳಿಸುವಂತೆ, ವಿದೇಶದಿಂದ ಕಪ್ಪು ಹಣ ಶೀಘ್ರ ತರುವಂತೆ ಸಲಹೆ ನೀಡಿದ್ದೆ ಅಷ್ಟೆ ಅಂತಾ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv