ಜೆಡಿಎಸ್-ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸಲಿ- ಪೇಜಾವರ ಶ್ರೀ ಹಾರೈಕೆ

ಮೈಸೂರು: ಕೇಂದ್ರ ಸರ್ಕಾರ ಐದು ವರ್ಷ ಪೂರೈಸಬೇಕು ಅಂತ ಹೇಳಿದ್ದೆ, ಕೇಂದ್ರ ಸರ್ಕಾರ ಮಾತ್ರವಲ್ಲ, ರಾಜ್ಯ ಈಗಿನ ಮೃತ್ರಿ ಸರ್ಕಾರವೂ ಐದು ವರ್ಷ ಪೂರೈಸಲಿ ಎಂಬುದು ನನ್ನ ಅಪೇಕ್ಷೆ ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಯಾವುದೇ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು. ಪದೇ ಪದೆ ಚುನಾವಣೆ ನಡೆಯಬಾರದು. ಅದರಿಂದ ದುಂದು ವೆಚ್ಚ, ಗಲಾಟೆ, ಗದ್ದಲ ಆಗುತ್ತೆ ಅಂತ ತಿಳಿಸಿದ್ರು.
ಅಲ್ಲದೇ ರೆಸಾರ್ಟ್​​ ರಾಜಕಾರಣದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿವೆ. ಆದ್ರೆ ಈಗಲೂ ಆ ಪಕ್ಷಗಳಿಗೆ ಭಯ ಇದೆ. ಈ ರೆಸಾರ್ಟ್ ರಾಜಕಾರಣ ನಿಲ್ಲಬೇಕು ಎಂದರು.
ಹೊರ ದೇಶಗಳಲ್ಲಿ ಸರ್ವ ಪಕ್ಷ ಸರ್ಕಾರಗಳ ರಚನೆಯಾಗಿವೆ. ಅದೇ ರೀತಿ ನಮ್ಮಲ್ಲಿಯೂ ಆಗಬೇಕು. ಚುನಾವಣಾ ಸಂದರ್ಭದಲ್ಲಿ ಅಪ್ಪನಾಣೆ ಅಂತೆಲ್ಲ ಟೀಕೆ ಮಾಡಿಕೊಂಡವರು ಈಗ ಒಟ್ಟಿಗಿದ್ದಾರೆ. ಜೆಡಿಎಸ್ – ಕಾಂಗ್ರೆಸ್ ಸೇರಿ ಸರ್ಕಾರ ರಚಿಸಿವೆ. ಇವುಗಳೊಂದಿಗೆ ಬಿಜೆಪಿಯೂ ಸೇರಿಕೊಂಡು ಸರ್ವ ಪಕ್ಷ ಸರ್ಕಾರ ರಚಿಸಬಹುದು. ಹಲವಾರು ದೇಶಗಳಲ್ಲಿ ಇಂತಹ ಸರ್ವ ಪಕ್ಷ ಸರ್ಕಾರಗಳು ಅಸ್ತಿತ್ವದಲ್ಲಿವೆ ಅಂತ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv