ಡೆತ್​ ನೋಟ್​ ಬರೆದಿಟ್ಟು ಪಿಡಿಒ ಆತ್ಮಹತ್ಯೆ

ಮಂಗಳೂರು: ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್​ನೋಟ್​ ಬರೆದಿಟ್ಟು ಪಿಡಿಒ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉಳ್ಳಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಪಿಡಿಓ ಕೃಷ್ಣಸ್ವಾಮಿ (47) ಆತ್ಮಹತ್ಯೆಗೆ ಶರಣಾದ ದುರ್ದೈವಿ. ತಾವು ಕೆಲಸ ಮಾಡುವ ಮುನ್ನೂರು ಗ್ರಾಮದ ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಡೆತ್​ ನೋಟ್​ ಕಂಡು ಬಂದಿದೆ. ನನ್ನ ಸಾವಿಗೆ ನಾನೇ ಕಾರಣ. ಅನುಕಂಪದಡಿ ನನ್ನ ನೌಕರಿಯನ್ನು ಪತ್ನಿಗೆ ನೀಡಿ ಎಂದು ಬರೆದಿದ್ದಾನೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv