ಅಬ್ಬಬ್ಬಾ ಏನ್ ಇಂಗ್ಲೀಷ್ ಗುರು ಪಿಸಿಬಿಯದ್ದು..!

ನಿನ್ನೆ ಏಷ್ಯಾಕಪ್​ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್​ಗಳ ಸೋಲನುಭವಿಸಿದೆ. ಇನ್ನೊಂದೆಡೆ ಭಾರತ ತಂಡವನ್ನು ಟ್ರೋಲ್​ ಮಾಡಲು ಹೋಗಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮುಜುಗರಕ್ಕೀಡಾಗಿದೆ.

ಪಿಸಿಬಿ ಟ್ರೋಲ್​ ಆಗಲು ಕಾರಣವೇನು ಗೊತ್ತಾ..?

ಏಷ್ಯಾಕಪ್​ ಪಂದ್ಯಾವಳಿಯ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಿಸಿಬಿ ತನ್ನ ಅಧಿಕೃತ ಟ್ವಿಟರ್​​​​ ಖಾತೆಯಲ್ಲಿ ದೊಡ್ಡ ಯಡವಟ್ಟೊಂದನ್ನು ಮಾಡಿಬಿಟ್ಟಿತ್ತು. 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಕದನದ ವೀಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ ಪಿಸಿಬಿ, ಅದರಲ್ಲಿ ಭಾರತ ಸೋತಿದ್ದರ ಬಗ್ಗೆ ಕಾಲೆಳೆಯಲು ಪ್ಲ್ಯಾನ್ ಮಾಡಿತ್ತು. ಆದ್ರೆ ತಾನು ತೋಡಿದ ಗುಂಡಿಯಲ್ಲಿ ತಾನೇ ಬಿದ್ದ ಪರಿಸ್ಥಿತಿ ಪಾಕ್​ಗೆ ಎದುರಾಗಿತ್ತು. ತಾನು ಮಾಡಿದ ಟ್ವೀಟ್​ನಲ್ಲಿ ಸ್ಪೆಲ್ಲಿಂಗ್​ ಮಿಸ್ಟೇಕ್ ಒಂದನ್ನ ಮಾಡಿ, ಟ್ವೀಟಿಗರಿಗೆ ಆಹಾರವಾಗಿದೆ. Happened ಎಂದು ಬರೆಯುವ ಬದಲಾಗಿ ಪಿಸಿಬಿ Hepoened ಎಂದು ಬರೆದು ಭಾರೀ ಮುಜುಗರಕ್ಕೆ ಒಳಗಾಗಿದೆ. ಇದನ್ನೇ ಟ್ವಿಟರತಿಗಳು ಟ್ರಾಲ್ ಮಾಡಿ ಪಿಸಿಬಿಯ ಕಾಲೆಳೆದಿದ್ದಾರೆ.

ಪಿಸಿಬಿ ಕಾಲೆಳೆದ ಸರ್​ ಜಡೇಜಾ..!

ಇನ್ನು ಪಿಸಿಬಿಯ ಈ ಟ್ವೀಟ್​ಗೆ ಕಮೆಂಟ್ ಮಾಡಿದ ಭಾರತದ ಆಟಗಾರ ರವೀಂದ್ರ ಜಡೇಜಾ, This “hapoens” to be Pakistan Cricket Team’s official Twitter account ಎಂದು ಪಿಸಿಬಿ ಕಾಲೆಳೆದಿದ್ದಾರೆ. ಜಡೇಜಾ ಅಷ್ಟೇ ಅಲ್ಲದೇ ಇನ್ನೂ ಹಲವರು ಪಿಸಿಬಿಯ ಮಿಸ್ಟೇಕ್​ಗೆ ವ್ಯಂಗ್ಯವಾಡಿದ್ದಾರೆ.